ADVERTISEMENT

ಉತ್ತರಾಖಂಡ | ಅಪಾಯಕ್ಕೆ ಸಿಲುಕಿದ್ದ ಇಬ್ಬರು ವಿದೇಶಿ ಪರ್ವತಾರೋಹಿಗಳ ರಕ್ಷಣೆ

ಪಿಟಿಐ
Published 6 ಅಕ್ಟೋಬರ್ 2024, 4:29 IST
Last Updated 6 ಅಕ್ಟೋಬರ್ 2024, 4:29 IST
<div class="paragraphs"><p>ಐಎಎಫ್ ಹೆಲಿಕಾಪ್ಟರ್</p></div>

ಐಎಎಫ್ ಹೆಲಿಕಾಪ್ಟರ್

   

(ಐಸ್ಟೋಕ್ ಚಿತ್ರ)

ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಚೌಖಂಬದಲ್ಲಿ ಚಾರಣದ ವೇಳೆ ಅಪಾಯಕ್ಕೆ ಸಿಲುಕಿದ್ದ ಇಬ್ಬರು ವಿದೇಶಿ ಮಹಿಳಾ ಪರ್ವತಾರೋಹಿಗಳನ್ನು ಇಂದು (ಭಾನುವಾರ) ಬೆಳಿಗ್ಗೆ ರಕ್ಷಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.

ADVERTISEMENT

ಅಕ್ಟೋಬರ್ 3ರಂದು 'ಚೌಖಂಬ III' ಶಿಖರಕ್ಕೆ ಹೋಗುವ ಮಾರ್ಗದಲ್ಲಿ 6,015 ಮೀಟರ್ ಎತ್ತರದಲ್ಲಿ ವಿದೇಶಿ ಪರ್ವತಾರೋಹಿಗಳು ಅಪಾಯಕ್ಕೆ ಸಿಲುಕಿದ್ದರು.

ಅಮೆರಿಕದ ಮಿಚೆಲ್ ಥೆರೆಸಾ ಡ್ವೊರಾಕ್ ಮತ್ತು ಬ್ರಿಟನ್‌ನ ಫಾವ್ ಜೇನ್ ಮ್ಯಾನರ್ಸ್ ಅವರ ರಕ್ಷಣೆಗಾಗಿ ಭಾರತೀಯ ವಾಯುಪಡೆ (ಐಎಎಫ್) ಎರಡು ಹೆಲಿಕಾಪ್ಟರ್‌ಗಳ ಮೂಲಕ ಕಾರ್ಯಾಚರಣೆಯನ್ನು ನಡೆಸಿತ್ತು.

ಇಂಡಿಯಾ ಮೌಂಟೆನಿಯರಿಗ್ ಫೌಂಡೇಶನ್‌‌ನ (ಐಎಂಎಫ್) ವಿದೇಶಿ ಪರ್ವತಾರೋಹಣದ ಭಾಗವಾಗಿ ಚಾರಣಕ್ಕೆ ತೆರಳಿದ್ದರು.

ಪರ್ವತಾರೋಹಿಗಳ ರಕ್ಷಣೆಗೆ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ತರಬೇತಿ ಪಡೆದ ಇಬ್ಬರು ನುರಿತ ಚಾರಣಿಗರು ಸಾಥ್ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.