ADVERTISEMENT

‘ರೈಲ್ವೆ (ತಿದ್ದುಪಡಿ) ಮಸೂದೆ’ ಲೋಕಸಭೆಯಲ್ಲಿ ಮಂಡನೆ

ಪಿಟಿಐ
Published 9 ಆಗಸ್ಟ್ 2024, 14:33 IST
Last Updated 9 ಆಗಸ್ಟ್ 2024, 14:33 IST
ಅಶ್ವಿನಿ ವೈಷ್ಣವ್
ಅಶ್ವಿನಿ ವೈಷ್ಣವ್   

ನವದೆಹಲಿ: ರೈಲ್ವೆ ಮಂಡಳಿಗೆ ಶಾಸನಬದ್ಧ ಅಧಿಕಾರ ನೀಡುವ ರೈಲ್ವೆ (ತಿದ್ದುಪಡಿ) ಮಸೂದೆ –2024‘ ಅನ್ನು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಲಾಯಿತು.

ಮಸೂದೆ ಮಂಡಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಈ ಮಸೂದೆಯ ಮೂಲಕ 1989ರ ರೈಲ್ವೆ ಕಾಯ್ದೆ ಜೊತೆಗೆ 1905ರ ಭಾರತೀಯ ರೈಲ್ವೆ ಮಂಡಳಿ ಕಾಯ್ದೆಯನ್ನು ಸಂಯೋಜನೆ‌ಗೊಳಿಸಲಾಗುವುದು ಎಂದು ತಿಳಿಸಿದರು.

‘ಹೊಸ ಮಸೂದೆಯು ಮಂಡಳಿಯ ಕಾನೂನು ವ್ಯಾಪ್ತಿಯನ್ನು ಸರಳೀಕರಣಗೊಳಿಸಲಿದೆ. ಎರಡೂ ಕಾಯ್ದೆಗಳನ್ನು ಪರಾಮರ್ಶಿಸಬೇಕಾದ ಅಗತ್ಯವನ್ನು ತಪ್ಪಿಸಲಿದೆ’ ಎಂದು ವಿವರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.