ADVERTISEMENT

ವಾಜಪೇಯಿ ಕುರಿತ ಆತ್ಮಕಥೆ ಮೆ.10ಕ್ಕೆ ಬಿಡುಗಡೆ

ಪಿಟಿಐ
Published 27 ಏಪ್ರಿಲ್ 2023, 15:46 IST
Last Updated 27 ಏಪ್ರಿಲ್ 2023, 15:46 IST
ಅಟಲ್‌ ಬಿಹಾರಿ ವಾಜಪೇಯಿ
ಅಟಲ್‌ ಬಿಹಾರಿ ವಾಜಪೇಯಿ   

ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಕುರಿತ ‘ವಾಜಪೇಯಿ: ದಿ ಆ್ಯಕ್ಸೆಂಟ್‌ ಆಫ್‌ ದಿ ಹಿಂದೂ ರೈಟ್‌’ ಆತ್ಮಕಥೆಯ ಮೊದಲನೇ ಆವೃತ್ತಿಯು ಮೇ 10ರಂದು ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಪುಸ್ತಕದ ಪ್ರಕಾಶಕರು ತಿಳಿಸಿದ್ದಾರೆ. 

ಈ ಪುಸ್ತಕವು ವಾಜಪೇಯಿ ಕುರಿತ ಜನಪ್ರಿಯ ಮಿಥ್ಯೆಗಳು ಮತ್ತು ಅವರ ಕುರಿತು ಯಾರಿಗೂ ತಿಳಿಯದ ಸಂಗತಿಗಳನ್ನು ಹೊಂದಿದೆ ಎನ್ನಲಾಗಿದೆ

ಅಭಿಷೇಕ್‌ ಚೌಧರಿ ಎಂಬ ಲೇಖಕರು ಈ ಪುಸ್ತಕವನ್ನು ರಚಿಸಿದ್ದಾರೆ. ಇದನ್ನು ನ್ಯೂ ಇಂಡಿಯಾ ಫೌಂಡೇಷನ್‌ ಸಹಕಾರದೊಂದಿಗೆ ಪಿಕಾಡೋರ್‌ ಇಂಡಿಯಾ ಸಂಸ್ಥೆಯು ಪ್ರಕಟಿಸಿದೆ. 

ADVERTISEMENT

‘ಸಂಘ ಪರಿವಾರದ ಜೊತೆ ವಾಜಪೇಯಿ ಅವರು ತಮ್ಮ ಆರಂಭಿಕ ದಿನಗಳಲ್ಲಿ ಹೊಂದಿದ್ದ ಒಡನಾಟದ ಕುರಿತು ಅರ್ಥ ಮಾಡಿಕೊಳ್ಳುವುದು  ಭಾರತದ ಬಲಪಂಥದ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತಲೂ ಕಠಿಣ. 8 ವರ್ಷಗಳು ಗಂಭೀರವಾದ ಅಧ್ಯಯನ ನಡೆಸಲಾಗಿದೆ. ಭಾರತ, ಅಮೆರಿಕ, ಬ್ರಿಟನ್‌ನಲ್ಲಿ ದೊರಕಿದ ಮತ್ತು ಈವರೆಗೂ ಬಹಿರಂಗವಾಗದ ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಕಲೆಹಾಕಲಾಗಿದೆ ಮತ್ತು ನೂರಾರು ಜನರ ಸಂದರ್ಶನ ಮಾಡಲಾಗಿದೆ’ ಎಂದು ಪ್ರಕಾಶಕರು ಪ್ರಕಟಣೆಯೊಂದರಲ್ಲಿ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.