ವಾರಾಣಸಿ: ಗ್ಯಾನವಾಪಿ ಮಸೀದಿ ಸಂಕೀರ್ಣದ ಇಡೀ ಆವರಣದ ಸಮೀಕ್ಷೆಯನ್ನು ಉತ್ಖನನ ಮಾಡಿ ನಡೆಸಬೇಕು ಎಂದು ಕೋರಿ ಹಿಂದೂ ಪರ ಗುಂಪು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ಹಿಂದೂ ಪರ ವಕೀಲರಾದ ಮದನ್ ಮೋಹನ್ ಯಾದವ್ ಅವರು ಈ ಮಾಹಿತಿ ನೀಡಿದ್ದಾರೆ. ಜಿಲ್ಲಾ ಕೋರ್ಟ್ ಜುಲೈ 2023ರಲ್ಲಿ ನೀಡಿದ್ದ ಆದೇಶದಂತೆ ಎಎಸ್‌ಐ ಸದ್ಯ ವೈಜ್ಞಾನಿಕ ಸಮೀಕ್ಷೆಯನ್ನು ಕೈಗೊಂಡಿದೆ.
ಎಎಸ್‌ಐ ಈ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಡಿ. 18ರಂದು ಜಿಲ್ಲಾ ಕೋರ್ಟ್‌ಗೆ ಸಲ್ಲಿಸಿದೆ. ಈ ಮೊದಲು ದೇಗುಲವಿದ್ದ ಸ್ಥಳದಲ್ಲೇ ಮಸೀದಿ ನಿರ್ಮಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಯಥಾಸ್ಥಿತಿಗೆ ಆದೇಶಿಸಲು ನಕಾರ
ನವದೆಹಲಿ (ಪಿಟಿಐ): ಗುಜರಾತ್‌ನ ಗಿರ್ ಸೋಮನಾಥ್‌ನಲ್ಲಿ ಕೈಗೊಂಡಿರುವ, ಮುಸ್ಲಿಮರಿಗೆ ಸೇರಿದ ಅನಧಿಕೃತ ಮಸೀದಿ ಮತ್ತು ಇತರೆ ಕಟ್ಟಡಗಳ ನೆಲಸಮ ಕಾರ್ಯಾಚರಣೆಯ ಕುರಿತಂತೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ನಿರ್ದೇಶಿಸಿ ಆದೇಶ ಹೊರಡಿಸಲು ಸುಪ್ರೀಂ ಕೋರ್ಟ್ ಶುಕ್ರವಾರ
ನಿರಾಕರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.