ADVERTISEMENT

ಗಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆ: ಅಂತ್ಯಸಂಸ್ಕಾರ, ಗಂಗಾ ಆರತಿಗೆ ಪ್ರತ್ಯೇಕ ಜಾಗ

ಪಿಟಿಐ
Published 31 ಜುಲೈ 2024, 12:38 IST
Last Updated 31 ಜುಲೈ 2024, 12:38 IST
<div class="paragraphs"><p>ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿ</p></div>

ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿ

   

ಪಿಟಿಐ ಚಿತ್ರ

ವಾರಾಣಸಿ: ವಾರಾಣಸಿಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಗಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಮಣಿಕರ್ಣಿಕಾ ಮತ್ತು ಹರಿಶ್ಚಂದ್ರ ಘಾಟ್‌ಗಳ ಮೆಟ್ಟಿಲುಗಳು ಜಲಾವೃತಗೊಂಡಿವೆ.

ADVERTISEMENT

ಹೀಗಾಗಿ ಅಂತ್ಯಸಂಸ್ಕಾರ ನಡೆಸುತ್ತಿದ್ದ ಜಾಗವನ್ನು ಬದಲಾಯಿಸಿ ಮೇಲಿನ ಮೆಟ್ಟಿಲುಗಳ ಮೇಲೆ ಮಾಡುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಗಂಗಾ ನದಿಯ ನೀರು ಮಟ್ಟಿಲುಗಳ ಮೇಲೆ ಹರಿಯುತ್ತಿರುವ ಕಾರಣ ಪ್ರತಿದಿನ ಸಂಧ್ಯಾಕಾಲದಲ್ಲಿ ನಡೆಸುವ ಗಂಗಾ ಆರತಿ ಜಾಗವನ್ನೂ ಬದಲಿಸಲಾಗಿದೆ. ದಶಾಶ್ವಮೇಧ ಘಾಟ್‌ನಲ್ಲಿ ಮೇಲಿನ ಮೆಟ್ಟಿಲುಗಳ ಮೇಲೆ ನಿಂತು ಗಂಗಾ ಆರತಿ ಮಾಡಲಾಗುತ್ತಿದೆ ಎಂದು ಗಂಗಾ ಸೇವಾ ನಿಧಿಯ ಆರತಿ ಆಯೋಜಕ ಶಿವಂ ಮಿಶ್ರಾ ಎನ್ನುವವರು ಮಾಹಿತಿ ನೀಡಿದ್ದಾರೆ.

ಅಲ್ಲದೆ, ಗಂಗಾ ನದಿಯಲ್ಲಿ ನೀರಿನ ಹರಿವು ತೀವ್ರವಾಗಿರುವುದರಿಂದ ಸಂಜೆ 6 ಗಂಟೆ ಬಳಿಕ ದೊಡ್ಡ ಗಾತ್ರದ ದೋಣಿಗಳನ್ನು ನದಿಗೆ ಇಳಿಸುವಂತಿಲ್ಲ. ದೋಣಿಗಳ ಸಾಮರ್ಥ್ಯದ ಅರ್ಧದಷ್ಟು ಜನರಿಗೆ ಮಾತ್ರ ಅವಕಾಶ. ದೋಣಿ ಹತ್ತುವ ಎಲ್ಲರೂ ಜೀವ ರಕ್ಷಕ ಜಾಕೆಟ್‌ಗಳನ್ನು ಧರಿಸುವುದು ಕಡ್ಡಾಯ ಎಂದು ಅಧಿಕಾರಿಗಳು ಸೂಚಿಸಿದ್ದಾರೆ. 

ಎನ್‌ಡಿಆರ್‌ಎಫ್‌ ತಂಡ ಘಾಟ್‌ಗಳಲ್ಲಿ ಗಸ್ತು ತಿರುಗುತ್ತಿರುತ್ತವೆ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.