ADVERTISEMENT

ವಾರಣಾಸಿಯ ಮುಸ್ಲಿಂ ಮಹಿಳೆಯರಿಂದ 'ಹಿರಿಯಣ್ಣ' ಮೋದಿಗೆ ವಿಶೇಷ ರಾಖಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 13:44 IST
Last Updated 11 ಆಗಸ್ಟ್ 2019, 13:44 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ವಾರಣಾಸಿ: ಮುಸ್ಲಿಂ ಸಮುದಾಯದಲ್ಲಿ ರೂಢಿಯಲ್ಲಿರುವ, ತ್ರಿವಳಿ ತಲಾಖ್‌ ಮೂಲಕ ವಿಚ್ಛೇದನ ಪಡೆಯುವುದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವ ನೂತನ ಕಾಯ್ದೆಯನ್ನು ಸ್ವಾಗತಿಸಿ ವಾರಣಾಸಿಯ ಮುಸ್ಲಿಂ ಮಹಿಳೆಯರು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷ ರಾಖಿಯನ್ನು ಕಳುಹಿಸಿದ್ದಾರೆ.

ಮೋದಿ ನಮಗೆ ಹಿರಿಯಣ್ಣ. ಅವರು ನಮ್ಮನ್ನು ಕಾಪಾಡಿದ್ದಾರೆ. ಹಾಗಾಗಿ ನಾವುಕೈಯಿಂದ ಮಾಡಿದ ವಿಶೇಷ ರಾಖಿಯನ್ನು ಮೋದಿಗೆ ಕಳುಹಿಸಿಕೊಡುತ್ತಿದ್ದೇನೆ ಎಂದು ಅಲ್ಲಿನ ಮಹಿಳೆಯರು ಹೇಳಿದ್ದಾರೆ.

ಮೋದಿಯವರಿಂದಾಗಿಯೇ ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ ಎಂದಾಯಿತು.ಮುಸ್ಲಿಂ ಸಮುದಾಯದ ಎಲ್ಲ ಮಹಿಳೆಯರಿಗೂ ಅವರು ಹಿರಿಯಣ್ಣ.ನಾವು ನಮ್ಮ ಅಣ್ಣನಿಗಾಗಿ ರಾಖಿ ಮಾಡಿದ್ದೇವೆ ಎಂದುರಾಮಪುರದ ಹುಮಾ ಬಾನು ಹೇಳಿದ್ದಾರೆ.

ADVERTISEMENT

ಆದಾಗ್ಯೂ, ಇದು ಪ್ರಚಾರಕ್ಕಾಗಿ ಮಾಡಿದ್ದು ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಹೇಳಿದೆ.

ಆರ್‌ಎಸ್ಎಸ್‌ನಲ್ಲಿರುವ ಮುಸ್ಲಿಂ ಅಧೀನ ಸಂಸ್ಥೆಗಳು ಈ ರೀತಿಯ ಕೆಲಸ ಮಾಡುತ್ತವೆ. ಈ ರೀತಿಯ ಕೆಲಸ ಮಾಡಲು ಅವರು ಮುಸ್ಲಿಮರನ್ನು ನೇಮಕ ಮಾಡುತ್ತಾರೆ. ಅಧಿಕಾರದಲ್ಲಿರುವವರು ಒತ್ತಡ ಹೇರಿ ಈ ರೀತಿ ಕೆಲಸಗಳನ್ನು ಮಾಡಿಸುತ್ತಾರೆ. ಇದು ಸರ್ಕಾರದ ಪ್ರಚಾರ ಕೆಲಸ ಎಂದು ಐಯುಎಂಎಲ್ ರಾಜ್ಯಾಧ್ಯಕ್ಷ ಮಾಟಿನ್ ಖಾನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.