ADVERTISEMENT

2021ಕ್ಕೆ ವರವರ ರಾವ್ ಕವನ ಸಂಕಲನ ಪ್ರಕಟ ‌

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 15:44 IST
Last Updated 10 ಅಕ್ಟೋಬರ್ 2020, 15:44 IST
ವರವರ ರಾವ್‌
ವರವರ ರಾವ್‌   

ಮುಂಬೈ: ಖ್ಯಾತ ಹೋರಾಟಗಾರ, ಲೇಖಕ ವರವರ ರಾವ್‌ ಅವರ ಕವನ ಸಂಕಲನವನ್ನು 2021ರಲ್ಲಿ ಪೆಂಗ್ವಿನ್‌ ರ್‍ಯಾಂಡಮ್‌ ಹೌಸ್‌ ಪ್ರಕಾಶನವು ಪ್ರಕಟಿಸಲಿದೆ.

ಎನ್‌.ವೇಣುಗೋಪಾಲ್‌ ಮತ್ತು ಮೀನಾ ಕಂದಸಾಮಿ ಅವರು‘ವರವರ ರಾವ್‌: ಇಂಡಿಯಾಸ್‌ ರೆವಲ್ಯೂಷನರಿ ಪೊಯೆಟ್‌’ ಹೆಸರಿನ ಈ ಕೃತಿಯ ಸಂಪಾದಕರಾಗಿದ್ದಾರೆ. ಎಲ್ಗಾರ್‌ ಪರಿಷದ್‌ ಹಾಗೂ ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ 81 ವರ್ಷದ ವರವರ ರಾವ್‌ ಅವರು ಪ್ರಸ್ತುತ ಜೈಲಿನಲ್ಲಿ ಇದ್ದಾರೆ.

ಈ ಕವನ ಸಂಕಲನವು ಇಂಗ್ಲಿಷ್‌‌ ಅನುವಾದವಾಗಿದ್ದು, ಅವರ ರಾಜಕೀಯ ನಂಬಿಕೆಗಳು ಹಾಗೂ ಜನರ ಹಕ್ಕುಗಳ ಶ್ರೇಷ್ಠತೆಯ ಪ್ರತಿಪಾದನೆಯನ್ನು ಇವುಗಳಲ್ಲಿ ಕಾಣಬಹುದಾಗಿದೆ. ಕೃತಿಯಲ್ಲಿನ ಬಹುತೇಕ ಕವನಗಳನ್ನು ಬಂಧನವಾಗುವ ಮುನ್ನ ವರವರ ರಾವ್‌ ಅವರೇ ಆಯ್ಕೆ ಮಾಡಿದ್ದರು. ‘ವರವರ ರಾವ್‌ ಅವರು ಶಿಕ್ಷಕ, ಪತ್ರಕರ್ತ, ಅನುವಾದಕ, ಕ್ರಾಂತಿಕಾರಿ ಲೇಖಕರಾಗಿದ್ದಾರೆ. ತೆಲುಗಿನಲ್ಲಿ ಅವರು 13 ಕವನ ಸಂಕಲನಗಳನ್ನು ತಂದಿದ್ದಾರೆ’ ಎಂದು ಪೆಂಗ್ವಿನ್‌ ಪ್ರಕಾಶನವು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.