ADVERTISEMENT

ಅಪ್ಪ–ಮಗನನ್ನು ಬಿಡದ ಮಿಗ್–21 ನಂಟು

ಪಿಟಿಐ
Published 1 ಮಾರ್ಚ್ 2019, 20:27 IST
Last Updated 1 ಮಾರ್ಚ್ 2019, 20:27 IST
   

ಮುಂಬೈ: ‘ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಕುಟುಂಬಕ್ಕೂ ಮಿಗ್–21 ಯುದ್ಧವಿಮಾನಕ್ಕೂ ಬಿಡದ ನಂಟು. ಆ ಕುಟುಂಬದ ಎರಡು ತಲೆಮಾರು ಮಿಗ್–21 ಅನ್ನು ಹಾರಿಸಿದೆ’ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ ನಿವೃತ್ತ ವಿಂಗ್ ಕಮಾಂಡರ್ ಪ್ರಕಾಶ್‌ ನವಲೆ.

ಅಭಿನಂದನ್ ಅವರ ತಂದೆ ಏರ್‌ ಮಾರ್ಷಲ್ ಎಸ್‌.ವರ್ಧಮಾನ್ ಮತ್ತು ಪ್ರಕಾಶ್ ನವಲೆ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ (ಎನ್‌ಡಿಎ) 1969–72ರಲ್ಲಿ ಒಟ್ಟಿಗೇ ತರಬೇತಿ ಪೂರೈಸಿದ್ದಾರೆ. ಇಬ್ಬರೂ ಒಟ್ಟಿಗೇ ಪೈಲಟ್ ತರಬೇತುದಾರರರಾಗಿ ಸೇವೆ ಸಲ್ಲಿಸಿದ್ದಾರೆ. ವರ್ಧಮಾನ್ ಅವರ ಕುಟುಂಬದ ಜತೆಗಿನ ಒಡನಾಟವನ್ನು ನವಲೆ ಅವರು ಹಂಚಿಕೊಂಡಿದ್ದಾರೆ.

‘ಚೆನ್ನೈನ ತಂಬಂರಂ ವಾಯುನೆಲೆಯಲ್ಲಿ ತರಬೇತುದಾರನಾಗಿ ತರಬೇತಿ ಪಡೆಯುವಾಗ ನಾವು ಹೆಚ್ಚು ಒಡನಾಟದಲ್ಲಿದ್ದೆವು. ನಮ್ಮ ಕುಟುಂಬದವರು ಆಗ್ಗಾಗ್ಗೆ ಅವರ ಮನೆಗೆ ಊಟಕ್ಕೆ ಹೋಗುತ್ತಿದ್ದೆವು. ವರ್ಧಮಾನ ಅವರ ಪತ್ನಿ ಸಹ ಒಳ್ಳೆಯ ವೈದ್ಯೆ. ನನ್ನ ಪತ್ನಿ ಗರ್ಭಿಣಿಯಾಗಿದ್ದಾಗ, ಅವರೇ ಕಾಳಜಿ ವಹಿಸಿದ್ದರು’ ಎಂದು ಅವರು ನೆನಪನ್ನು ಹಂಚಿಕೊಂಡಿದ್ದಾರೆ.

‘ಆರಂಭದಲ್ಲಿ ನಾನು ಎನ್‌ಡಿಎಯಿಂದ ಯುದ್ಧವಿಮಾನ ಪೈಲಟ್‌ ಆಗಿಯೇ ಹೊರಬಂದಿದ್ದೆ.ನಾನು ಮತ್ತು ವರ್ಧಮಾನ್ ಅವರು ಹೈದರಾಬಾದ್‌ನ ಹಕೀಂಪೇಟ್ ವಾಯುನೆಲೆಯಲ್ಲಿ ತರಬೇತುದಾರರಾಗಿ ಸೇವೆಯಲ್ಲಿದ್ದೆವು. ಆದರೆ ನಂತರದ ದಿನಗಳಲ್ಲಿ ನಾನು ಹೆಲಿಕಾಪ್ಟರ್‌ ವಿಭಾಗಕ್ಕೆ ಹೋದೆ. ವರ್ಧಮಾನ್ ಯುದ್ಧವಿಮಾನದಲ್ಲೇ ಮುಂದುವರಿದರು’ ಎಂದು ನವಲೆ ಹೇಳಿದ್ದಾರೆ.

‘ವರ್ಧಮಾನ್ ಮಿಗ್‌–21 ಚಲಾಯಿಸುತ್ತಿದ್ದರು. ಸೇವೆಗೆ ನಿಯೋಜನೆಗೊಂಡ ಮತ್ತು ಮೇಲ್ದರ್ಜೆಗೆ ಏರಿಸಲಾದ ಮಿಗ್‌–21 ಯುದ್ಧವಿಮಾನಗಳ ಸಾಮರ್ಥ್ಯ ಪರಿಶೀಲಿಸುವ ‘ಟೆಸ್ಟ್‌ ಪೈಲಟ್‌’ ಆಗಿ ವರ್ಧಮಾನ ಸೇವೆ ಸಲ್ಲಿಸಿದ್ದಾರೆ. ವಿಂಗ್ ಕಮಾಂಡರ್ ಅಭಿನಂದನ್ ಸಹ ಮಿಗ್–21 ಚಲಾಯಿಸುತ್ತಿದ್ದಾರೆ. ಅಭಿನಂದನ್‌ ಅನ್ನು ನಾನು ಮೊದಲ ಬಾರಿ ನೋಡಿದಾಗ ಅವರಿನ್ನೂ 3 ವರ್ಷದ ಬಾಲಕ’ ಎಂದು ಅವರು ನೆನಪಿಸಿಕೊಂಡಿದ್ದಾರೆ.

1982ರಲ್ಲಿ ಒಡಿಶಾದ ಅಂದಿನ ಮುಖ್ಯಮಂತ್ರಿ ಜೆ.ಬಿ.ಪಟ್ನಾಯಕ್ ಅವರನ್ನು ಗುಂಪುದಾಳಿಯಿಂದ ಪ್ರಕಾಶ್ ನವಲೆ ಅವರು ಕಾಪಾಡಿದ್ದರು. ಇದಕ್ಕಾಗಿ ಅವರಿಗೆ ‘ಶೌರ್ಯ ಚಕ್ರ’ ನೀಡಿ ಗೌರವಿಸಲಾಗಿತ್ತು.

ಇವನ್ನೂ ಓದಿ...

* ಇವನ್ನೂ ಓದಿ...

*ವಿಂಗ್ ಕಮಾಂಡರ್ ಅಭಿನಂದನ್‌ ಪಾಕ್ ಸೈನಿಕರ ವಶಕ್ಕೆ ಸಿಗುವ ಮುನ್ನಾ...
*ಸೇನೆಯ ಬಗ್ಗೆ ಗೌರವವಿದ್ದರೆ ಫೇಸ್‌ಬುಕ್‌ನಲ್ಲಿ ಈ 10 ನಿಯಮಗಳನ್ನು ಪಾಲಿಸಿ
*ಧೀರರ ಕುಟುಂಬ: ವಿಂಗ್ ಕಮಾಂಡರ್ ಅಭಿನಂದನ್ ಅವರ ಮೂರು ತಲೆಮಾರು ದೇಶಕ್ಕಾಗಿ ದುಡಿದಿದೆ
*ವಿಮಾನದಲ್ಲಿ ಅಭಿನಂದನ್‍ ಕುಟುಂಬಕ್ಕೆ ಎದ್ದು ನಿಂತು ಗೌರವ ಸೂಚಿಸಿದ ಪ್ರಯಾಣಿಕರು
*ಪಾಕ್‌ ಪ್ರಯಾಣಿಕರಿಗೆ ಆಹಾರ ವಿತರಿಸಿದ ಭಾರತದ ಪೊಲೀಸರು
*ಅಭಿನಂದನ್ ಕರೆತರಲು ವಿಮಾನ ಕಳಿಸಬೇಡಿ ಎಂದ ಪಾಕ್
*ವಿಂಗ್ ಕಮಾಂಡರ್ ಅಭಿನಂದನ್‌ ಸ್ವಾಗತಕ್ಕೆ ವಾಘಾ ಗಡಿಯಲ್ಲಿ ಸಿದ್ಧತೆ
*ಅಭಿನಂದನ್‌ ಕರೆತನ್ನಿ: ಕಾಳಜಿಯ ಕರೆ
*ಪಾಕಿಸ್ತಾನದ ವಶದಲ್ಲಿ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌? ವಿಡಿಯೊ ಬಿಡುಗಡೆ
*ಭಾರತ ವಾಯುಪಡೆ ಉರುಳಿಸಿದ ಪಾಕ್ ಯುದ್ಧವಿಮಾನದ ಮೊದಲ ಚಿತ್ರ ಬಹಿರಂಗ
*ಯಡಿಯೂರಪ್ಪ ಹೇಳಿಕೆಯನ್ನು ರಿಟ್ವೀಟ್ ಮಾಡಿ ವ್ಯಂಗ್ಯವಾಡಿದಪಾಕ್‌ ಪ್ರಧಾನಿಯ ಪಕ್ಷ​
*ಪೈಲಟ್‌ ಅಭಿನಂದನ್‌ ವಿಡಿಯೊ ಲಿಂಕ್ ತೆಗೆಯುವಂತೆ ಯುಟ್ಯೂಬ್‌ಗೆ ಐಟಿ ಸಚಿವಾಲಯ ಆಗ್ರಹ​
*ವಾಯುದಾಳಿಯು ಕರ್ನಾಟಕದಲ್ಲಿ 22 ಸ್ಥಾನಗಳನ್ನು ಗೆಲ್ಲಲು ನೆರವಾಗಲಿದೆ: ಯಡಿಯೂರಪ್ಪ​
*ನೀವು ನಿದ್ರೆ ಮಾಡ್ತೀರೋ ಇಲ್ವೋ; ಅಭಿನಂದನ್ ಅವರನ್ನು ಕರೆತನ್ನಿ: ನಟಿ ರಮ್ಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.