ADVERTISEMENT

ಅಮೆಜಾನ್‌, ವಾಲ್‌ಮಾರ್ಟ್‌ ಬದಲು ಸಣ್ಣ ಮಾರಾಟಗಾರರನ್ನು ಬೆಂಬಲಿಸಿ: ವರುಣ್‌ ಗಾಂಧಿ

ಐಎಎನ್ಎಸ್
Published 8 ಡಿಸೆಂಬರ್ 2021, 8:36 IST
Last Updated 8 ಡಿಸೆಂಬರ್ 2021, 8:36 IST
ಬಿಜೆಪಿ ಸಂಸದ ವರುಣ್‌ ಗಾಂಧಿ (ಚಿತ್ರ: ಸತೀಶ್‌ ಬಡಿಗೇರ್‌)
ಬಿಜೆಪಿ ಸಂಸದ ವರುಣ್‌ ಗಾಂಧಿ (ಚಿತ್ರ: ಸತೀಶ್‌ ಬಡಿಗೇರ್‌)   

ನವದೆಹಲಿ: ಕೇಂದ್ರ ಸರ್ಕಾರದ ತಪ್ಪಾದ ಆರ್ಥಿಕ ನಿರ್ವಹಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಉದ್ಯಮ ಮತ್ತು ಮಾರಾಟಗಾರರ ವ್ಯಾಪಾರವನ್ನು ಬಲವಂತವಾಗಿ ಮುಚ್ಚುವಂತಹ ಪರಿಸ್ಥಿತಿ ಬಂದಿದೆ ಎಂದು ಬಿಜೆಪಿ ಸಂಸದ ವರುಣ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಅಮೆಜಾನ್‌ ಮತ್ತು ವಾಲ್‌ಮಾರ್ಟ್‌ಗಳ ಬದಲು ನೆರೆಕರೆಯ ಸಣ್ಣ ಮಾರಾಟಗಾರರಿಂದ ಖರೀದಿಸುವ ಮೂಲಕ ಅವರನ್ನು ಬೆಂಬಲಿಸುವಂತೆ ಜನರಿಗೆ ಬಿಜೆಪಿ ಸಂಸದ ವರುಣ್‌ ಗಾಂಧಿ ಮನವಿ ಮಾಡಿದ್ದಾರೆ.

'ಜಾಗತಿಕ ಹಿಂಜರಿತದ ಸಂದರ್ಭದಲ್ಲಿ ರಾಷ್ಟ್ರದ ಆರ್ಥಿಕತೆಗೆ ಸಣ್ಣ ಉತ್ಪಾದಕರು ಮತ್ತು ಮಾರಾಟಗಾರರು ಕೊಡುಗೆ ನೀಡಿದ್ದರು. ಆದರೆ ಭ್ರಷ್ಟಾಚಾರ, ಬೆಲೆಯೇರಿಕೆ ಮತ್ತು ತಪ್ಪಾದ ಆರ್ಥಿಕ ನಿರ್ವಹಣೆಯಿಂದ ಹೆಚ್ಚಿನ ಸಂಖ್ಯೆಯ ಸಣ್ಣ ಮಾರಾಟಗಾರರನ್ನು ಬಲವಂತವಾಗಿ ವ್ಯಾಪಾರ ನಿಲ್ಲಿಸುವಂತೆ ಮಾಡಿದೆ. ಸಣ್ಣ ಮಾರಾಟಗಾರರಿಂದ ಕೊಳ್ಳುವ ಮೂಲಕ ಅವರನ್ನು ಬೆಂಬಲಿಸಬೇಕಿದೆ. ಅಮೆಜಾನ್‌ ಮತ್ತು ವಾಲ್‌ಮಾರ್ಟ್‌ ನಂತಹಮಾರಾಟಗಾರರ ಬದಲು ಸಣ್ಣ ವ್ಯಾಪಾರಿಗಳಿಂದ ಖರೀದಿಸಬೇಕು' ಎಂದು ವರುಣ್‌ ಗಾಂಧಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

ರೈತರ ಪ್ರತಿಭಟನೆ ವೇಳೆ ನಡೆದ ಲಖಿಂಪುರ ಖೇರಿ ಹಿಂಸಾಚಾರದ ವಿರುದ್ಧಪಿಲಿಭಿತ್‌ ಲೋಕಸಭೆ ಕ್ಷೇತ್ರದ ವರುಣ್‌ ಗಾಂಧಿ ಗಟ್ಟಿಯಾಗಿ ಧ್ವನಿಯೆತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.