ಮುಂಬೈ: ಬಾಂಬೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT-B) ಹಾಸ್ಟೆಲ್ ಕ್ಯಾಂಟೀನ್‌ನಲ್ಲಿ ಸಸ್ಯಾಹಾರಿಗಳಿಗೆ ಮಾತ್ರ’ ಎಂದು ಫಲಕ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ. ಆಹಾರ ತಾರತಮ್ಯ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
‘ಸಸ್ಯಹಾರಿಗಳು ಮಾತ್ರ ಇಲ್ಲಿ ಕುಳಿತುಕೊಳ್ಳಬಹುದು’ ಎಂದು ಬರೆದಿರುವ ಫಲಕವನ್ನು 12ನೇ ಹಾಸ್ಟೆಲ್ ಕ್ಯಾಂಟೀನ್‌ನಲ್ಲಿ ಕಳೆದ ವಾರ ಹಾಕಲಾಗಿದ್ದು, ಅದರ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘ಕ್ಯಾಂಟೀನ್‌ನಲ್ಲಿ ಪೋಸ್ಟರ್ ಹಾಕಿದವರು ಯಾರು ಎನ್ನುವುದು ತಿಳಿದಿಲ್ಲ. ಆಹಾರ ಪಡೆಯಲು ಯಾರಿಗೂ ಪ್ರತ್ಯೇಕವಾದ ಜಾಗವಿಲ್ಲ ಅಲ್ಲದೆ ಇದರ ಬಗ್ಗೆ ಸಂಸ್ಥೆಗೆ ಯಾವುದೇ ಮಾಹಿತಿ ಇಲ್ಲ’ ಎಂದು ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.
ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್ ವಿದ್ಯಾರ್ಥಿ ಸಮೂಹದ ಪ್ರತಿನಿಧಿ ಘಟನೆಯನ್ನು ಖಂಡಿಸಿ ಪೋಸ್ಟರ್ ಗಳನ್ನು ಹರಿದು ಹಾಕಿದರು.
ಘಟನೆ ವಿವಾದ ಉಂಟುಮಾಡುತ್ತಿದ್ದಂತೆ ಹಾಸ್ಟೆಲ್ ಪ್ರಧಾನ ಕಾರ್ಯದರ್ಶಿ ’ಜೈನರಿಗೆ ಆಹಾರ ಪಡೆಯಲು ಪ್ರತ್ಯೇಕ ಸ್ಥಳವಿದೆ. ಆದರೆ ಕುಳಿತುಕೊಳ್ಳಲು ಪ್ರತ್ಯೇಕ ಸ್ಥಳ ಎಂಬುದಿಲ್ಲ. ಅಲ್ಲದೆ ಹಾಸ್ಟೆಲ್‌ಗಳಲ್ಲಿ ಆಹಾರ ತಾರತಮ್ಯ ಎನ್ನುವುದಿಲ್ಲ, ಕೆಲವು ವಿದ್ಯಾರ್ಥಿಗಳು ಅವರಷ್ಟಕ್ಕೆ ಅವರೇ ಇದನ್ನು ಮಾಡಿರಬಹುದಷ್ಟೆ’ ಎಂದು ವಿದ್ಯಾರ್ಥಿಗಳಿಗೆ ಸ್ಪಷ್ಟನೆ ನೀಡಿ ಇ –ಮೇಲ್ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.