ತಂಜಾವೂರು, ತಮಿಳುನಾಡು : ‘ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ನಾಯಕ ವೇಲುಪಿಳ್ಳೈ ಪ್ರಭಾಕರನ್ ಆರೋಗ್ಯವಾಗಿದ್ದಾರೆ ಮತ್ತು ಬಹಿರಂಗವಾಗಿ ಕಾಣಿಸಿಕೊಳ್ಳಲು ಈ ಸಂದರ್ಭ ಪೂರಕವಾಗಿದೆ’ ಎಂದು ತಮಿಳು ರಾಷ್ಟ್ರೀಯವಾದಿ ನಾಯಕ ಪಳ ನೆಡುಮಾರನ್ ಹೇಳಿದ್ದಾರೆ.
‘ಅಂತರರಾಷ್ಟ್ರೀಯ (ರಾಜಕೀಯ) ವಾತಾವರಣ ಮತ್ತು ಶ್ರೀಲಂಕಾದಲ್ಲಿ ಸಿಂಹಳೀಯರು ರಾಜಪಕ್ಸೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದು ಪ್ರಭಾಕರನ್ ಬಹಿರಂಗವಾಗಿ ಕಾಣಿಸಿಕೊಳ್ಳಲು ಸೂಕ್ತ ವಾತಾವರಣ ಸೃಷ್ಟಿಸಿದೆ’ ಎಂದು ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಘೋಷಣೆಯು ಅವರ (ಪ್ರಭಾಕರನ್) ಬಗ್ಗೆ ಹಬ್ಬಿದ್ದ ಅನುಮಾನಗಳನ್ನು ಕೊನೆಗೊಳಿಸುತ್ತದೆ. ಪ್ರಭಾಕರನ್ ಶೀಘ್ರದಲ್ಲೇ ಶ್ರೀಲಂಕಾದಲ್ಲಿ ತಮಿಳರಿಗಾಗಿ ಯೋಜನೆ ಘೋಷಿಸಲು ಸಜ್ಜಾಗಿದ್ದಾರೆ. ವಿಶ್ವದ ಎಲ್ಲಾ ತಮಿಳರು ಅವರನ್ನು ಬೆಂಬಲಿಸಬೇಕು ಎಂದು ತಿಳಿಸಿದರು.
ಎಲ್‌ಟಿಟಿಇ ಪ್ರಬಲವಾಗಿರುವವರೆಗೂ ಶ್ರೀಲಂಕಾದಲ್ಲಿ ತಮ್ಮ ಹಿಡಿತದಲ್ಲಿರುವ ಪ್ರದೇಶಗಳಲ್ಲಿ ಭಾರತಕ್ಕೆ ವಿರುದ್ಧವಾದ ಯಾವುದೇ ಶಕ್ತಿಗಳಿಗೆ ಹಿಡಿತ ಸಾಧಿಸಲು ಅವರು ಅವಕಾಶ ನೀಡಲಿಲ್ಲ. ಅಲ್ಲದೆ, ಭಾರತವನ್ನು ವಿರೋ
ಧಿಸುವ ರಾಷ್ಟ್ರಗಳಿಂದ ಯಾವುದೇ ಬೆಂಬಲ ಪಡೆದಿಲ್ಲ ಎಂದರು.
2009ರಲ್ಲಿ ಶ್ರೀಲಂಕಾ ಸೇನೆ ಮತ್ತು ಎಲ್‌ಟಿಟಿಇ ನಡುವಿನ ಯುದ್ಧದಲ್ಲಿ ಪ್ರಭಾಕರನ್ ಹತ್ಯೆಯಾಗಿದ್ದನ್ನು ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.