ADVERTISEMENT

ಕಾಂಗ್ರೆಸ್‌ ಜತೆ ಮೈತ್ರಿ ಕಷ್ಟ: ಎಎಪಿ

ಪ್ರಜಾ ಮತ 2019

ಪಿಟಿಐ
Published 17 ಜನವರಿ 2019, 18:28 IST
Last Updated 17 ಜನವರಿ 2019, 18:28 IST
ಮನೀಷ್ ಸಿಸೋಡಿಯಾ ಹಾಗೂ ಗೋಪಾಲ್‌ ರಾಯ್‌
ಮನೀಷ್ ಸಿಸೋಡಿಯಾ ಹಾಗೂ ಗೋಪಾಲ್‌ ರಾಯ್‌   

ನವದೆಹಲಿ: ‘ದೆಹಲಿಯಲ್ಲಿ ಕಾಂಗ್ರೆಸ್‌ ಅಸ್ತಿತ್ವ ಕಳೆದುಕೊಂಡಿದೆ. ಹೀಗಾಗಿ ಮೈತ್ರಿ ಸಾಧ್ಯತೆ ಬಗ್ಗೆ ಹೇಳುವುದು ಕಷ್ಟ’ ಎಂದುಆಮ್‌ ಆದ್ಮಿ ಪಾರ್ಟಿಯ (ಎಎಪಿ) ದೆಹಲಿ ಘಟಕದ ಮುಖ್ಯಸ್ಥ ಗೋಪಾಲ್‌ ರಾಯ್‌ ಗುರುವಾರ ಹೇಳಿದ್ದಾರೆ.

‘ಮುಂಬರುವ ಲೋಕಸಭೆ ಚುನಾವಣೆಯಲ್ಲಿದೆಹಲಿಯಲ್ಲಿ ಬಿಜೆಪಿಯನ್ನು ಸೋಲಿಸಲು ನಾವು ಸಮರ್ಥರಿದ್ದೇವೆ. ಇಲ್ಲಿನ7 ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಈಗಾಗಲೇ ತಯಾರಿ ನಡೆಸಿದ್ದೇವೆ. ಈ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಸೋಲಿಸುವ ಸಾಮರ್ಥ್ಯ ನಮಗಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಬಹಳ ಹಿಂದಿದೆ’ ಎಂದು ಅವರು ತಿಳಿಸಿದರು.

ಕಾಂಗ್ರೆಸ್‌ ದೆಹಲಿ ಘಟಕದ ಅಧ್ಯಕ್ಷರನ್ನಾಗಿ ಶೀಲಾ ದೀಕ್ಷಿತ್‌ ಅವರ ನೇಮಕ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘ದೆಹಲಿಯಲ್ಲಿ 15 ವರ್ಷಗಳವರೆಗೆ ಆಡಳಿತ ನಡೆಸಿದ್ದ ದೀಕ್ಷಿತ್‌ ಅವರಿಗೆ ಜನರು ಬೀಳ್ಕೊಡುಗೆ ನೀಡಿದ್ದಾರೆ. ಆದರೂ ಅವರನ್ನು ಮರಳಿ ಕರೆತಂದಿರುವುದು ಕಾಂಗ್ರೆಸ್‌ಗೆ ನಾಯಕತ್ವದ ಕೊರತೆ ಇದೆ ಎಂಬುವುದನ್ನು ತೋರಿಸುತ್ತದೆ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.