ಬೆಂಗಳೂರು:ಪಾಕಿಸ್ತಾನದ ಸೇನಾಧಿಕಾರಿಗಳ ಎದುರು ವಿಂಗ್ ಕಮಾಂಡರ್ ಅಭಿನಂದನ್ ಅವರು ನೀಡಿರುವ ಹೇಳಿಕೆಯ ವಿಡಿಯೊವನ್ನು ಪಾಕಿಸ್ತಾನದ ಮಾಧ್ಯಮ ‘ಡಾನ್’ ಪ್ರಸಾರ ಮಾಡಿದೆ.
ಅಭಿನಂದನ್ ಅವರ ಹೇಳಿಕೆಯನ್ನು ಅಲ್ಲಲ್ಲಿ ಕತ್ತರಿಸಿ ಪ್ರಸಾರ ಮಾಡಲಾಗಿದೆ. ಹೇಳಿಕೆ ವಿವರ ಈ ರೀತಿ ಇದೆ.
‘ನನ್ನ ಹೆಸರು ವಿಂಗ್ ಕಮಾಂಡರ್ ಅಭಿನಂದನ್. ಭಾರತೀಯ ವಾಯುಪಡೆಯ ಯುದ್ಧವಿಮಾನದ ಪೈಲಟ್. ನಾನು ನನ್ನ ಗುರಿಗಾಗಿ (ಎದುರಾಳಿ ವಿಮಾನ) ಹುಡುಕಾಡುತ್ತಿದ್ದಾಗ ನಿಮ್ಮ (ಪಾಕಿಸ್ತಾನದ) ವಾಯುಪಡೆ, ನನ್ನ ವಿಮಾನವನ್ನು ಹೊಡೆದುರುಳಿಸಿತು. ನಾನು ವಿಮಾನದಿಂದ ‘ಇಜೆಕ್ಟ್’ ಆದೆ. ಪ್ಯಾರಾಚೂಟ್ ಮೂಲಕ ನೆಲಕ್ಕಿಳಿದೆ. ಆಗ ನನ್ನ ಕೈಯಲ್ಲಿ ಪಿಸ್ತೂಲು ಇತ್ತು.
‘ಅಲ್ಲಿ ತುಂಬಾ ಜನರಿದ್ದರು. ನಾನು ಪಿಸ್ತೂಲನ್ನು ಕೆಳಗಿಳಿಸಿ ಅಲ್ಲಿಂದ ಓಡಿದೆ. ನನ್ನನ್ನು ನಾನು ರಕ್ಷಿಸಿಕೊಳ್ಳಲು ನನಗಿದ್ದದ್ದು ಅದೊಂದೆ ದಾರಿ. ಆ ಜನರು ನನ್ನನ್ನು ಅಟ್ಟಿಸಿಕೊಂಡು ಬಂದರು. ಅವರು ತೀರಾ ಉದ್ವೇಗದಲ್ಲಿದ್ದರು. ಆಗ ಪಾಕಿಸ್ತಾನ ಸೇನೆಯ ಇಬ್ಬರು ಅಧಿಕಾರಿಗಳು ಬಂದು ಆ ಗುಂಪಿನಿಂದ ನನ್ನನ್ನು ರಕ್ಷಿಸಿದರು. ಆ ಜನರು ನನಗೆ ಏನೂ ಮಾಡದಂತೆ ತಡೆದರು.
‘ಅಲ್ಲಿಂದ ನನ್ನನ್ನು ಅವರು ತಮ್ಮ ಪೋಸ್ಟ್‌ಗೆ ಕರೆದುಕೊಂಡು ಹೋದರು. ಅಲ್ಲೇ ನನಗೆ ಪ್ರಥಮ ಚಿಕಿತ್ಸೆ ನೀಡಿದರು. ನಂತರ ಹೆಚ್ಚಿನ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ನನಗೆ ಮತ್ತಷ್ಟು ಚಿಕಿತ್ಸೆ ನೀಡಲಾಯಿತು. ಪಾಕಿಸ್ತಾನದ ಸೇನೆ ಅತ್ಯಂತ ವೃತ್ತಿಪರವಾಗಿ ನಡೆದುಕೊಂಡಿತು. ಅವರಲ್ಲಿ ನಾನು ಶಾಂತಿಯನ್ನು ಕಂಡೆ. ಅವರ ಜತೆ ನಾನು ಸ್ವಲ್ಪ ಸಮಯ ಕಳೆದಿದ್ದೇನೆ. ಅವರಿಂದ ನಾನು ಪ್ರಭಾವಿತನಾಗಿದ್ದೇನೆ.
‘ಭಾರತೀಯ ಮಾಧ್ಯಮಗಳು ಸತ್ಯವನ್ನು ಅತ್ತಿತ್ತ ಎಳೆದಾಡುತ್ತವೆ. ಸಣ್ಣ–ಸಣ್ಣ ಸಂಗತಿಗಳಿಗೂ ಬೆಂಕಿ ಹಚ್ಚಿ, ಉಪ್ಪುಖಾರ ಬೆರೆಸಿ ಜನರನ್ನು ಪ್ರಚೋದಿಸುತ್ತಾರೆ’ ಎಂದು ಅಭಿನಂದನ್ ಹೇಳಿದ್ದಾರೆ.
ಅಭಿನಂದನ್ ಅವರ ಹೇಳಿಕೆಯನ್ನು ಅಲ್ಲಲ್ಲಿ ತುಂಡರಿಸಿ, ಆಯ್ದ ಭಾಗವನ್ನು ಮಾತ್ರ ಪ್ರಸಾರ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
* ಇವನ್ನೂ ಓದಿ...
* ತಾಯ್ನಾಡಿಗೆ ‘ಅಭಿ’ವಂದನೆ, ಆತಂಕ ಸೃಷ್ಟಿಸಿದ ವಿಳಂಬ
*ವಿಂಗ್ ಕಮಾಂಡರ್ ಅಭಿನಂದನ್ ಪಾಕ್ ಸೈನಿಕರ ವಶಕ್ಕೆ ಸಿಗುವ ಮುನ್ನಾ...
*ಸೇನೆಯ ಬಗ್ಗೆ ಗೌರವವಿದ್ದರೆ ಫೇಸ್‌ಬುಕ್‌ನಲ್ಲಿ ಈ 10 ನಿಯಮಗಳನ್ನು ಪಾಲಿಸಿ
*ಧೀರರ ಕುಟುಂಬ: ವಿಂಗ್ ಕಮಾಂಡರ್ ಅಭಿನಂದನ್ ಅವರ ಮೂರು ತಲೆಮಾರು ದೇಶಕ್ಕಾಗಿ ದುಡಿದಿದೆ
*ವಿಮಾನದಲ್ಲಿ ಅಭಿನಂದನ್ ಕುಟುಂಬಕ್ಕೆ ಎದ್ದು ನಿಂತು ಗೌರವ ಸೂಚಿಸಿದ ಪ್ರಯಾಣಿಕರು
*ಪಾಕ್ ಪ್ರಯಾಣಿಕರಿಗೆ ಆಹಾರ ವಿತರಿಸಿದ ಭಾರತದ ಪೊಲೀಸರು
*ವಾಘಾ- ಅಟ್ಟಾರಿ ಗಡಿಯಲ್ಲಿ ಬೀಟಿಂಗ್ ರಿಟ್ರೀಟ್ ರದ್ದು ಮಾಡಿದ ಬಿಎಸ್‍ಎಫ್
*ಅಭಿನಂದನ್ ಕರೆತರಲು ವಿಮಾನ ಕಳಿಸಬೇಡಿ ಎಂದ ಪಾಕ್
*ವಿಂಗ್ ಕಮಾಂಡರ್ ಅಭಿನಂದನ್ ಸ್ವಾಗತಕ್ಕೆ ವಾಘಾ ಗಡಿಯಲ್ಲಿ ಸಿದ್ಧತೆ
*ಅಭಿನಂದನ್ ಕರೆತನ್ನಿ: ಕಾಳಜಿಯ ಕರೆ
*ಪಾಕಿಸ್ತಾನದ ವಶದಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್? ವಿಡಿಯೊ ಬಿಡುಗಡೆ
*ಭಾರತ ವಾಯುಪಡೆ ಉರುಳಿಸಿದ ಪಾಕ್ ಯುದ್ಧವಿಮಾನದ ಮೊದಲ ಚಿತ್ರ ಬಹಿರಂಗ
*ಯಡಿಯೂರಪ್ಪ ಹೇಳಿಕೆಯನ್ನು ರಿಟ್ವೀಟ್ ಮಾಡಿ ವ್ಯಂಗ್ಯವಾಡಿದಪಾಕ್ ಪ್ರಧಾನಿಯ ಪಕ್ಷ
*ಪೈಲಟ್ ಅಭಿನಂದನ್ ವಿಡಿಯೊ ಲಿಂಕ್ ತೆಗೆಯುವಂತೆ ಯುಟ್ಯೂಬ್‌ಗೆ ಐಟಿ ಸಚಿವಾಲಯ ಆಗ್ರಹ
*ವಾಯುದಾಳಿಯು ಕರ್ನಾಟಕದಲ್ಲಿ 22 ಸ್ಥಾನಗಳನ್ನು ಗೆಲ್ಲಲು ನೆರವಾಗಲಿದೆ: ಯಡಿಯೂರಪ್ಪ
*ನೀವು ನಿದ್ರೆ ಮಾಡ್ತೀರೋ ಇಲ್ವೋ; ಅಭಿನಂದನ್ ಅವರನ್ನು ಕರೆತನ್ನಿ: ನಟಿ ರಮ್ಯಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.