ಭೋಪಾಲ್: ಆಂಬ್ಯುಲೆನ್ಸ್ ಸಿಗದೆ ಅಪಘಾತದಲ್ಲಿ ಮೃತಪಟ್ಟ ನಾಲ್ಕು ವರ್ಷದ ಬಾಲಕಿ ಶವವನ್ನು ವ್ಯಕ್ತಿಯೊಬ್ಬರು ಭುಜದ ಮೇಲೆ ಹೊತ್ತುಕೊಂಡು ಹೋಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ರಸ್ತೆ ಅಪಘಾತದಲ್ಲಿ ಬಾಲಕಿ ಮೃತಪಟ್ಟಿದ್ದಳು. ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಛತ್ತರ್‌ಪುರದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಮೃತದೇಹವನ್ನು ಊರಿಗೆ ಕೊಂಡೊಯ್ಯಲು ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ವ್ಯವಸ್ಥೆ ಒದಗಿಸಿರಲಿಲ್ಲ.
ಇದರಿಂದ ಕುಪಿತಗೊಂಡ ಬಾಲಕಿಯ ಚಿಕ್ಕಪ್ಪ, ಮೃತದೇಹವನ್ನು ಭುಜದ ಮೇಲೆ ಹೊತ್ತುಕೊಂಡ ಬಸ್ ನಿಲ್ದಾಣದತ್ತ ಹೋಗಿದ್ದಾರೆ. ಬಳಿಕ ಸರ್ಕಾರಿ ಬಸ್‌ನಲ್ಲಿ ಶವವನ್ನು ಸಾಗಿಸಿದ್ದಾರೆ. ಈ ದೃಶ್ಯ ನೋಡುಗರ ಮನಕಲಕುವಂತಿತ್ತು.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಛತ್ತರ್‌ಪುರ ಜಿಲ್ಲೆಯಲ್ಲಿ ತುರ್ತು ಸೌಲಭ್ಯಗಳ ಕೊರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕಳೆದ ಆಗಸ್ಟ್ 1ರಂದು ಮಧ್ಯಪ್ರದೇಶದಲ್ಲಿ ಯುವಕನೊಬ್ಬ 80 ಕಿ.ಮೀಟರ್ ದೂರ ಬೈಕ್‌ನ ಹಿಂಬದಿ ಸೀಟಿನಲ್ಲಿ ತಾಯಿಯ ಮೃತದೇಹ ಸಾಗಿಸಿದ ಘಟನೆ ನಡೆದಿತ್ತು.
ಮೃತದೇಹವನ್ನು ತಮ್ಮ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲು ಆ್ಯಂಬುಲೆನ್ಸ್ ಹಾಗೂ ಇತರೆ ಖಾಸಗಿ ವಾಹನ ಚಾಲಕರು ಹೆಚ್ಚು ಮೊತ್ತ ಕೇಳಿದ್ದರಿಂದ ಇಷ್ಟೊಂದು ಹಣ ಹೊಂದಿಸಲಾಗದೇ ಯುವಕ ಬೈಕ್‌ನಲ್ಲೇ ಮೃತದೇಹವನ್ನಿಟ್ಟು ಸ್ವಗ್ರಾಮಕ್ಕೆ ಸಾಗಿಸಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.