ADVERTISEMENT

ನಾಲಿಗೆ ಚೀಪುವಂತೆ ಬಾಲಕನಿಗೆ ದಲೈಲಾಮಾ ಹೇಳಿರುವ ವಿಡಿಯೊಗೆ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಏಪ್ರಿಲ್ 2023, 15:37 IST
Last Updated 9 ಏಪ್ರಿಲ್ 2023, 15:37 IST
ದಲೈಲಾಮಾ
ದಲೈಲಾಮಾ    

ನವದೆಹಲಿ: ಟಿಬೆಟಿಯನ್‌ ಬೌದ್ಧ ಧರ್ಮಗುರು ದಲೈಲಾಮಾ ಅವರು ಪುಟ್ಟ ಬಾಲಕನ ತುಟಿಗಳಿಗೆ ಚುಂಬಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊ ತಿಂಗಳ ಹಿಂದಿನದು ಎನ್ನಲಾಗುತ್ತಿದ್ದು ದಲೈಲಾಮಾ ಅವರ ಈ ವಿಡಿಯೊಗೆ ಟೀಕೆಗಳು ವ್ಯಕ್ತವಾಗಿವೆ.

ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಧರ್ಮಗುರುವಿಗೆ ಗೌರವ ಸಲ್ಲಿಸಲು ಬಂದಿದ್ದ ಪುಟಾಣಿ ಬಾಲಕನ ತುಟಿಗಳನ್ನು ದಲೈಲಾಮಾ ಚುಂಬಿಸುವುದನ್ನು ವಿಡಿಯೊದಲ್ಲಿ ಕಾಣಬಹುದು. ನಂತರ ತಮ್ಮ ನಾಲಿಗೆಯನ್ನು ಹೊರ ಚಾಚಿದ ದಲೈಲಾಮಾ, ಅದನ್ನು ಚೀಪುವಂತೆ ಬಾಲಕನಿಗೆ ಹೇಳಿದ್ದಾರೆ. ನಂತರ ಆ ಬಾಲಕ ಅವರ ನಾಲಿಗೆ ಚೀಪಲು ಮುಂದಾಗುತ್ತಾನೆ. ಇದು ವಿಡಿಯೊದಲ್ಲಿ ಸೆರೆಯಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಆಕ್ರೋಶದ ಪ್ರತಿಕ್ರಿಯೆ ವ್ಯಕ್ತವಾಗಿದೆ.

ADVERTISEMENT

ಇದು ದಲೈಲಾಮಾ ಅವರ ಯೋಗ್ಯವಲ್ಲದ ವರ್ತನೆ. ಈ ಕೆಟ್ಟ ನಡವಳಿಕೆಯನ್ನು ಯಾರೂ ಸಮರ್ಥಿಸಬಾರದು ಎಂದು ದೀಪಿಕಾ ಪುಷ್ಕರ್ ನಾಥ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಇದು ಆತಂಕಕಾರಿ ದೃಶ್ಯ ಎಂದು ನ್ಯಾಟ್ಲಿ ಎಂಬುವರು ಟ್ವೀಟ್‌ ಮಾಡಿದ್ದಾರೆ.

ಇದು ಅಸಹ್ಯಕರ ನಡವಳಿಕೆ ಎಂದು ಅನೇಕರು ಕಿಡಿಕಾರಿದ್ದಾರೆ.

ಈ ವಿಡಿಯೊ ಬಗ್ಗೆ ದಲೈಲಾಮಾ ಅಥವಾ ಅವರ ಧಾರ್ಮಿಕ ಸಂಸ್ಥೆಯವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.