ಬೆಂಗಳೂರು:ವಿಜಯ್ ದಿವಸ್ (ಬಾಂಗ್ಲಾದೇಶಕ್ಕೆ ವಿಮೋಚನೆ ತಂದುಕೊಟ್ಟ ದಿನ)ಅಂಗವಾಗಿ ಅಂದು ಶೌರ್ಯ ಮೆರೆದ ಭಾರತೀಯ ಯೋಧರ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕಗಣ್ಯರು ಸ್ಮರಿಸಿದ್ದಾರೆ.
ಡಿಸೆಂಬರ್ 16, 1971ರಲ್ಲಿಭಾರತ ಸೇನೆ, ಪಶ್ಚಿಮ ಪಾಕಿಸ್ತಾನದ (ಈಗಿನ ಪಾಕಿಸ್ತಾನ) ಹಿಡಿತದಲ್ಲಿದ್ದ ಪೂರ್ವ ಪಾಕಿಸ್ತಾನವನ್ನು (ಈಗಿನ ಬಾಂಗ್ಲದೇಶ)ವಿಮುಕ್ತಿಗೊಳಿಸಿತು. ಈ ದಿನವನ್ನು ನೆನೆದುಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಸೈನಿಕರಿಗೆ ನಮನ ಸಲ್ಲಿಸಿದ್ದಾರೆ.
ವಿಜಯ್ ದಿವಸ್ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು, ‘ಭಾರತೀಯ ಯೋಧ ಪರಾಕ್ರಮಕ್ಕೆ ನನ್ನ ನಮನಗಳು. 1971ರ ಈ ದಿನ ನಮ್ಮ ಸೇನೆ ಇತಿಹಾಸ ರಚಿಸಿದೆ. ಅದುಸದಾ ಸುವರ್ಣಾಕ್ಷರದಲ್ಲಿ ಬರೆದಿಡುವಂತಹದ್ದು’ ಎಂದು ಹೇಳಿದ್ದಾರೆ.
ಮೇಜರ್ ಸುರೇಂದ್ರ ಪೊನಿಯಾ, ‘93 ಸಾವಿರ ಪಾಕಿಸ್ತಾನ ಸೈನಿಕರನ್ನು ಶರಣಾಗುವಂತೆ ಮಾಡಿದ ಧೈರ್ಯವಂತ ಭಾರತೀಯ ಸೈನಿಕರಿಗೆ ನನ್ನ ನಮನಗಳು’ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಹ್ಲಾದ್ ಜೋಶಿ ಅವರೂಯೋಧರಿಗೆ ನಮನ ಸಲ್ಲಿಸಿಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.