ADVERTISEMENT

ವಿಜಯ ದಿವಸ್‌: ಬಿಎಸ್‌ಎಫ್‌ನಿಂದ ಕವಾಯಿತು

ಪಿಟಿಐ
Published 16 ಡಿಸೆಂಬರ್ 2023, 15:45 IST
Last Updated 16 ಡಿಸೆಂಬರ್ 2023, 15:45 IST
<div class="paragraphs"><p>1971ರ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರು ನಮನ ಸಲ್ಲಿಸಿದರು.</p></div>

1971ರ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರು ನಮನ ಸಲ್ಲಿಸಿದರು.

   

ಪಿಟಿಐ

ನವದೆಹಲಿ: ಬಾಂಗ್ಲಾ ವಿಮೋಚನೆಗಾಗಿ 1971ರಲ್ಲಿ ನಡೆದ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೇನೆ ಜಯಗಳಿಸಿದ್ದರ ಸ್ಮರಣಾರ್ಥ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ಶನಿವಾರ ಇದೇ ಮೊದಲ ಬಾರಿಗೆ ‘ವಿಜಯ ದಿವಸ್‌ ಕವಾಯಿತು’ ಆಯೋಜಿಸಿತ್ತು.

ADVERTISEMENT

ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೇರಿದಂತೆ ಹಲವರು ಗೌರವ ನಮನ ಸಲ್ಲಿಸಿದರು.

‘ಗಡಿಭದ್ರತಾ ಪಡೆಯು ಇದೇ ಮೊದಲ ಬಾರಿಗೆ ‘ವಿಜಯ ದಿವಸ್‌ ಪರೇಡ್‌’ ಆಯೋಜಿದೆ. ಇದಕ್ಕೂ ಮುನ್ನ ಬೆಟಾಲಿಯನ್‌ ಮತ್ತು ಸೇನಾ ಘಟಕಗಳು ಮಾತ್ರ ಕಾರ್ಯಕ್ರಮ ಆಯೋಜಿಸಿ ಹುತಾತ್ಮರಿಗೆ ನಮನ ಸಲ್ಲಿಸುತ್ತಿದ್ದವು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

1971ರ ಡಿಸೆಂಬರ್ 16ರಂದು ಪಾಕಿಸ್ತಾನದ 90,000 ಸೈನಿಕರು ಶರಣಾಗತಿಯಾಗುವ ಮೂಲಕ ಭಾರತವು ಯುದ್ಧದಲ್ಲಿ ಜಯ ಸಾಧಿಸಿತ್ತು. ಇದರ ಪರಿಣಾಮವಾಗಿ ಬಾಂಗ್ಲಾದೇಶ ಸ್ವತಂತ್ರ ರಾಷ್ಟ್ರದ ಉಗಮವಾಯಿತು. ಈ ವಿಜಯದ ಸ್ಮರಣಾರ್ಥ ಡಿ.16ರಂದು ಭಾರತ ‘ವಿಜಯ ದಿವಸ್‌’ ಆಚರಿಸುತ್ತದೆ.

ಯುದ್ಧದಲ್ಲಿ ಭಾರತದ ಬಿಎಸ್‌ಎಫ್‌ನ 125 ಸಿಬ್ಬಂದಿ ಹುತಾತ್ಮರಾಗಿದ್ದರು ಮತ್ತು 392 ಮಂದಿ ಗಾಯಗೊಂಡಿದ್ದರು.

ನಮ್ಮ ಯೋಧರ ನಿಸ್ವಾರ್ಥ ತ್ಯಾಗವನ್ನು ರಾಷ್ಟ್ರವು ಸದಾ ನೆನಪಿನಲ್ಲಿ ಇಡುತ್ತದೆ. ಅಪ್ರತಿಮ ಶೌರ್ಯದ ಮೂಲಕ ಐತಿಹಾಸಿಕ ಗೆಲುವು ಸಾಧಿಸಿದ ಯೋಧರಿಗೆ ಗೌರವ ನಮನಗಳು
ದ್ರೌಪದಿ ಮುರ್ಮು, ರಾಷ್ಟ್ರಪತಿ
1971ರಲ್ಲಿ ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಯೋಧರಿಗೆ ಹೃದಯಪೂರ್ವಕ ಗೌರವ ನಮನಗಳು. ಅವರ ಶೌರ್ಯ ಮತ್ತು ಸಮರ್ಪಣೆ ದೇಶದ ಹೆಮ್ಮೆಯ ಪ್ರತೀಕ. ಅವರ ತ್ಯಾಗ ಮತ್ತು ಅದಮ್ಯ ಉತ್ಸಾಹ ದೇಶದ ಜನರ ಹೃದಯದಲ್ಲಿ ಮತ್ತು ರಾಷ್ಟ್ರದ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯಲಿದೆ
ನರೇಂದ್ರ ಮೋದಿ, ಪ್ರಧಾನಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.