ನವದೆಹಲಿ: ಹರ್ಯಾಣದ ಕಾಂಗ್ರೆಸ್ ನಾಯಕ ವಿಕಾಸ್ ಚೌಧರಿ ಗುರುವಾರ ಬೆಳಗ್ಗೆ ದೆಹಲಿಯ ಹೊರವಲಯ ಫರೀದಾಬಾದ್‌ನಲ್ಲಿ ಗುಂಡೇಟಿಗೆ ಬಲಿಯಾಗಿದ್ದಾರೆ.
ಜಿಮ್ ಹೊರಗೆ ವಾಹನ ಪಾರ್ಕ್ ಮಾಡುತ್ತಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.ಚೌಧರಿ ಅವರು ಫರೀದಾಬಾದ್‌ನ ಸೆಕ್ಟರ್ 9ಕ್ಕೆ ಆಗಾಗ ಭೇಟಿ ನೀಡುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾರಿನ ಸಮೀಪ ಬಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಚೌಧರಿ ಮೇಲೆ ಗುಂಡು ಹಾರಿಸಿದ್ದಾರೆ. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚೌಧರಿ ಅವರ ಕಾರು ಬಳಿ ಬಂದು ವಿಂಡ್ ಶೀಲ್ಡ್ ಮೂಲಕ ಒಬ್ಬ ಗುಂಡು ಹಾರಿಸಿದರೆ, ಮತ್ತೊಬ್ಬ ಡ್ರೈವರ್ ಸೀಟಿನ ಬದಿಯಿಂದ ಗುಂಡು ಹಾರಿಸಿರುವುದು ಸಿಸಿಟಿವಿ ದೃಶ್ಯದಲ್ಲಿದೆ.
ಗಾಯಗೊಂಡ ಚೌಧರಿಯನ್ನು ತಕ್ಷಣವೇ ಆಸ್ಪತ್ರೆಗೆ ಸೇರಿದರೂ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.ಪ್ರಾಣ ಉಳಿಸುವುದಕ್ಕಾಗಿ ವೈದ್ಯರು ತುಂಬಾ ಪ್ರಯತ್ನಿಸಿದರು.ನಮ್ಮ ತಂಡ ಜೀವ ಉಳಿಸುವ ಶ್ರಮ ನಡೆಸಿದರೂ ಸಾಧ್ಯವಾಗಲಿಲ್ಲ.ಚೌಧರಿ ದೇಹಕ್ಕೆ ಹಲವಾರು ಗುಂಡು ಹೊಕ್ಕಿತ್ತು. ಅವರನ್ನು ಉಳಿಸಲು ನಮಗೆ ಸಾಧ್ಯವಾಗಿಲ್ಲ.ಕನಿಷ್ಠ10 ಬುಲೆಟ್ ಚೌಧರಿ ದೇಹ ಹೊಕ್ಕಿದೆ ಎಂದಿದ್ದಾರೆಡಾ. ಸೌರಭ್.
ದುಷ್ಕರ್ಮಿಗಳು ಚೌಧರಿಯನ್ನು ಜಿಮ್‌ವರೆಗೆ ಹಿಂಬಾಲಿಸಿಕೊಂಡು ಬಂದಿದ್ದರೇ? ಎಂಬುದು ಸಿಸಿಟಿವಿ ದೃಶ್ಯಗಳಲ್ಲಿ ಇಲ್ಲ. ಆದರೆ ಚೌಧರಿ ಅವರು ಎಸ್‌ಯುವಿ ನಿಲುಗಡೆ ಮಾಡುವ ಹೊತ್ತಲ್ಲಿ ದುಷ್ಕರ್ಮಿಗಳಿಬ್ಬರು ಬಿಳಿ ಸೆಡಾನ್ ಕಾರಿನಲ್ಲಿ ಬಂದಿಳಿದಿರುವುದು ಸಿಸಿಟಿವಿ ದೃಶ್ಯದಲ್ಲಿದೆ.
ಕಾಂಗ್ರೆಸ್ ಜಿಲ್ಲಾ ಘಟಕದ ವಕ್ತಾರರಾಗಿರುವ ವಿಕಾಸ್ ಚೌಧರಿ, ಹರ್ಯಾಣದ ಕಾಂಗ್ರೆಸ್ ಮುಖ್ಯಸ್ಥ ಅಶೋಕ್ ತನ್ವಾರ್ ಅವರ ಆಪ್ತರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.