ADVERTISEMENT

ಹನುಮಾನ್‌ ಚಾಲೀಸಾವನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿದ ಲೇಖಕ ವಿಕ್ರಮ್‌ ಸೇಠ್‌

ಪಿಟಿಐ
Published 16 ಜೂನ್ 2024, 16:08 IST
Last Updated 16 ಜೂನ್ 2024, 16:08 IST
ವಿಕ್ರಮ್ ಸೇಠ್ 
ವಿಕ್ರಮ್ ಸೇಠ್    

ನವದೆಹಲಿ: ಸಂತ ಕವಿ ತುಳಸಿದಾಸ ರಚಿತ ‘ಹನುಮಾನ್‌ ಚಾಲೀಸಾ’ ವನ್ನು ಖ್ಯಾತ ಲೇಖಕ ವಿಕ್ರಮ್‌ ಸೇಠ್‌ ಅವರು ಇಂಗ್ಲಿಷ್‌ಗೆ ಅನುವಾದ ಮಾಡಿದ್ದು, ಇದೇ ತಿಂಗಳು ಬಿಡುಗಡೆಯಾಗಲಿದೆ ಎಂದು ಪ್ರಕಾಶನ ಸಂಸ್ಥೆ ‘ಸ್ಪೀಕಿಂಗ್‌ ಟೈಗರ್‌’ ಭಾನುವಾರ ತಿಳಿಸಿದೆ.

ಇಂಗ್ಲಿಷ್‌ ಅನುವಾದದ ಜೊತೆಗೆ, ದೇವನಾಗರಿ ಮತ್ತು ರೋಮನ್‌ ಲಿಪಿಯಲ್ಲಿಯೂ ಹನುಮಾನ್‌ ಚಾಲೀಸಾ ಪದ್ಯಗಳನ್ನು ಈ ಕೃತಿಯಲ್ಲಿ ಮುದ್ರಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

‘ಕಾದಂಬರಿಕಾರರೂ ಆಗಿರುವ ವಿಕ್ರಮ್‌ ಸೇಠ್‌ ಕವಿಯಾಗಿಯೂ ಪ್ರಸಿದ್ಧರಾಗಿದ್ದಾರೆ. ಈ ಕಾವ್ಯವನ್ನು ಎಲ್ಲ ಲಯ, ಪ್ರಾಸ ಹಾಗೂ ಛಂದಸ್ಸಿಗೆ ಅನುಗುಣವಾಗಿ ಅನುವಾದ ಮಾಡಲು ಹಲವು ವರ್ಷಗಳ ಶ್ರಮ ಹಾಕಿದ್ದಾರೆ. ಅವರ ಪರಿಶ್ರಮದ ಫಲವಾಗಿ ಉತ್ತಮ ಅನುವಾದ ಹೊರಬಂದಿದ್ದು, ಇನ್ನು ಮುಂದೆ ಲಕ್ಷಾಂತರ ಆಸಕ್ತರು ಹನುಮಾನ್‌ ಚಾಲೀಸಾವನ್ನು ಇಂಗ್ಲಿಷ್‌ನಲ್ಲಿಯೇ ಪಠಿಸಬಹುದು’ ಎಂದು ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ.

ADVERTISEMENT

40 ಪದ್ಯಗಳನ್ನು ಒಳಗೊಂಡ ಹನುಮಾನ್‌ ಚಾಲೀಸಾ, ಹೆಸರೇ ಹೇಳುವಂತೆ ಹನುಮಾನ್‌ ದೇವರಿಗೆ ಅರ್ಪಿಸಲಾಗಿರುವ ಕೀರ್ತನೆ. ಲಕ್ಷಾಂತರ ಜನರಿಗೆ ಇದು ಬಾಯಿಪಾಠವೂ ಆಗಿದೆ. ಸುಖ–ದುಃಖ, ಜಯ–ಅಪಜಯ ಅಥವಾ ಸಂಕಷ್ಟದ ಸಮಯದಲ್ಲಿ ಇಲ್ಲವೇ ಮನೋಸ್ಥೈರ್ಯ ನೀಡುವಂತೆ ಹನುಮಾನ್‌ ದೇವರಿಗೆ ಮೊರೆ ಇಡಲು ಭಕ್ತರು ಈ ಪದ್ಯವನ್ನು ಪಠಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.