ಲಖನೌ: ವಿಧಾನಸಭಾ ಚುನಾವಣೆಗೆ ಸಜ್ಜಾದ ಉತ್ತರ ಪ್ರದೇಶದಲ್ಲಿ ಪ್ರಚಾರ ಕಾರ್ಯಕ್ಕೆ ತೆರಳಿದ್ದ ಬಿಜೆಪಿ ಶಾಸಕರೊಬ್ಬರನ್ನು ಗ್ರಾಮಸ್ಥರು ಬೆನ್ನಟ್ಟಿದ್ದಾರೆ.
ಶಾಸಕ ವಿಕ್ರಮ್ ಸೈನಿ ಅವರು ಮುನ್ವಾರ್‌ಪುರ್ ಗ್ರಾಮಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಉದ್ರಿಕ್ತ ಗ್ರಾಮಸ್ಥರು ಶಾಸಕರನ್ನು ತಡೆದು ವಾಪಸ್ ಹೋಗುವಂತೆ ಹೇಳಿದ್ದಾರೆ.
ಗ್ರಾಮಸ್ಥರ ಪ್ರತಿರೋಧ ಎದುರಿಸಿದ ಶಾಸಕರು, ಬೇರೆ ಆಯ್ಕೆಯಿಲ್ಲದೇ ಕಾರು ಹತ್ತಿ ವಾಪಸ್ ಹೋಗಿದ್ದಾರೆ.
ಈ ಕುರಿತ ವಿಡಿಯೊವನ್ನು ಕಿಸಾನ್ ಏಕತಾ ಮಂಚ್ ಟ್ವೀಟ್ ಮಾಡಿದ್ದು, ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿರುವ ಶಾಸಕ ಸೈನಿ, ಗ್ರಾಮಸ್ಥರ ಪೈಕಿ ಕೆಲವರು ಮದ್ಯದ ಅಮಲಿನಲ್ಲಿದ್ದರು. ಹೀಗಾಗಿ ಭೇಟಿಗೆ ಪ್ರತಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ ವಾಪಸ್ ಬಂದಿರುವುದಾಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.