ADVERTISEMENT

ಅಮೆರಿಕದ ಭಾರತೀಯ ರಾಯಭಾರಿಯಾಗಿ ವಿನಯ್‌ ಕ್ವಾತ್ರ ನೇಮಕ

ಪಿಟಿಐ
Published 19 ಜುಲೈ 2024, 13:59 IST
Last Updated 19 ಜುಲೈ 2024, 13:59 IST
<div class="paragraphs"><p>ವಿನಯ್‌ ಕ್ವಾತ್ರ</p></div>

ವಿನಯ್‌ ಕ್ವಾತ್ರ

   

ನವದೆಹಲಿ: ಮಾಜಿ ವಿದೇಶಾಂಗ ಕಾರ್ಯದರ್ಶಿ ವಿನಯ್‌ ಕ್ವಾತ್ರ ಅವರನ್ನು ಅಮೆರಿಕದ ಭಾರತೀಯ ರಾಯಭಾರಿಯಾಗಿ ಶುಕ್ರವಾರ ನೇಮಿಸಲಾಗಿದೆ. ಶೀಘ್ರದಲ್ಲೇ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ತರಣ್‌ಜಿತ್‌ ಸಂಧು ಅವರು ಜನವರಿಯಲ್ಲಿ ನಿವೃತ್ತರಾದ ಬಳಿಕ ಅಮೆರಿಕದ ಭಾರತೀಯ ರಾಯಭಾರಿ ಹುದ್ದೆ ಖಾಲಿ ಉಳಿದಿತ್ತು. 

ADVERTISEMENT

ಕ್ವಾತ್ರ ಅವರು  1988ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್‌) ಅಧಿಕಾರಿಯಾಗಿದ್ದರು. ಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅವರು 2022ರ ಮೇ ತಿಂಗಳಿನಿಂದ 2024ರ ಜುಲೈವರೆಗೆ ವಿದೇಶಾಂಗ ಕಾರ್ಯದರ್ಶಿ ಹುದ್ದೆಯಲ್ಲಿದ್ದರು.

ಇದಕ್ಕೂ ಮೊದಲು ಅವರು ಫ್ರಾನ್ಸ್‌ ಮತ್ತು ನೇಪಾಳ ರಾಷ್ಟ್ರಗಳ ಭಾರತೀಯ ರಾಯಭಾರಿಯಾಗಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.