ADVERTISEMENT

ಮಹಿಳೆಯರ ಮೇಲೆ ದೌರ್ಜನ್ಯ: ಬಿಜೆಪಿ ಮುಖಂಡರ ಮೇಲೆಯೇ ಹೆಚ್ಚು ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2024, 23:30 IST
Last Updated 21 ಆಗಸ್ಟ್ 2024, 23:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೋಲ್ಕತ್ತದ ವೈದ್ಯ ವಿದ್ಯಾರ್ಥಿನಿ ಮೇ‌ಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವು ದೇಶದಾದ್ಯಂತ ದೊಡ್ಡ ಸದ್ದು ಮಾಡುತ್ತಿದೆ. ಇದೇ ಸಂದರ್ಭದಲ್ಲಿ ದಿ ಅಸೋಸಿಯೇಷನ್ ಫಾರ್‌ ಡೆಮಾಕ್ರಟಿಕ್ ರಿಫಾರ್ಮ್ಸ್‌ (ಎಡಿಆರ್‌) ಹಾಗೂ ನ್ಯಾಷನಲ್‌ ಎಲೆಕ್ಷನ್‌ ವಾಚ್‌ (ನ್ಯೂ) ಸಂಸ್ಥೆಗಳು ಸೇರಿ ವರದಿಯೊಂದನ್ನು ಬುಧವಾರ ಬಿಡುಗಡೆ ಮಾಡಿವೆ. ಬಿಜೆಪಿಯ ಶಾಸಕರು ಹಾಗೂ ಸಂಸದರ ಮೇಲೆಯೇ ಅತಿ ಹೆಚ್ಚು ಮಹಿಳೆಯರ ಮೇಲೆ ಎಸಗಲಾದ ಗಂಭೀರ ದೌರ್ಜನ್ಯದ ಪ್ರಕರಣಗಳು ದಾಖಲಾಗಿದೆ.

ದಾಖಲಾದ ಗಂಭೀರ ಪ್ರಕರಣಗಳು

ADVERTISEMENT

ಶಾಸಕರು ಹಾಗೂ ಸಂಸದರ ಮೇಲೆ ಆ್ಯಸಿಡ್‌ ದಾಳಿ, ಅತ್ಯಾಚಾರ, ಮಹಿಳೆಯ ಘನತೆಗೆ ಧಕ್ಕೆ ಉಂಟು ಮಾಡುವುದು, ಲೈಂಗಿಕ ದೌರ್ಜನ್ಯ, ಮಹಿಳೆಯರನ್ನು ವಿವಸ್ತ್ರಗೊಳಿಸುವುದು, ವೇಶ್ಯಾವಾಟಿಕೆ ನಡೆಸಲು ಬಾಲಕಿಯರನ್ನು ಮಾರುವುದು ಸೇರಿದಂತೆ ಒಟ್ಟು 16 ತರಹದ ಗಂಭೀರ ದೌರ್ಜನ್ಯದ ಪ್ರಕರಣಗಳು ದಾಖಲಾಗಿವೆ.

‘ಟಿಕೆಟ್‌ ನೀಡಿದ್ದಕ್ಕೆ ಕಾರಣ ನೀಡಿ’

‘ಮಹಿಳೆಯರ ಮೇಲೆ ಎಸಗಿದ ದೌರ್ಜನ್ಯ ಪ್ರಕರಣಗಳ ಆರೋಪಿಗಳಿಗೆ ಪಕ್ಷಗಳು ಟಿಕೆಟ್‌ ನೀಡಬಾರದು. ಇವರ ಮೇಲಿರುವ ಪ್ರಕರಣಗಳ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸಬೇಕು. 2020ರಲ್ಲಿ ಸುಪ್ರೀಂ ಕೋರ್ಟ್‌ ಹೇಳಿದ ಹಾಗೆ, ಇಂಥ ಅಭ್ಯರ್ಥಿಗಳಿಗೆ ಯಾಕಾಗಿ ಟಿಕೆಟ್‌ ನೀಡಲಾಗುತ್ತಿದೆ ಎಂಬುದನ್ನು ಪಕ್ಷಗಳು ಸಾರ್ವಜನಿಕಗೊಳಿಸಬೇಕು’ ಎಂದು ಎಡಿಆರ್‌ ಹಾಗೂ ‘ನ್ಯೂ’ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ.

ಆಧಾರ: ಎಡಿಆರ್‌ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.