ನವದೆಹಲಿ: ವೀಸಾ ನಿಯಮ ಉಲ್ಲಂಘಿಸಿ ಕಾನೂನುಬಾಹಿರವಾಗಿ ನೆಲೆಸಿದ್ದಸುಮಾರು 150 ಮಂದಿ ಭಾರತೀಯರನ್ನು ಅಮೆರಿಕ ಗಡಿಪಾರು ಮಾಡಿದೆ. ಗಡಿಪಾರಾದ ಭಾರತೀಯರು ಬುಧವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗಡಿಪಾರಾಗಿರುವ ಭಾರತೀಯರನ್ನು ವಿಶೇಷ ವಿಮಾನದ ಮೂಲಕ ಭಾರತಕ್ಕೆ ಕಳುಹಿಸಲಾಗಿದ್ದುಈ ವಿಮಾನಬಾಂಗ್ಲಾದೇಶದ ಮೂಲಕ ಬೆಳಗ್ಗೆ 6 ಗಂಟೆಗೆ ದೆಹಲಿ ತಲುಪಿದೆ.
ಸರಿಸುಮಾರು 15 ಮಂದಿ ಭಾರತೀಯರು ವಲಸೆಇಲಾಖೆಯಲ್ಲಿ ತಮ್ಮ ದಾಖಲೆಗಳನ್ನು ಸಲ್ಲಿಸಿದ್ದು, 11 ಗಂಟೆಯ ಹೊತ್ತಿಗೆ ಒಬ್ಬೊಬ್ಬರಾಗಿ ವಿಮಾನ ನಿಲ್ದಾಣದಿಂದ ಹೊರಬಂದಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಅಕ್ಟೋಬರ್ 18ರಂದು ಸುಮಾರು 3000 ಭಾರತೀಯರನ್ನು ಮೆಕ್ಸಿಕನ್ವಲಸೆ ಪ್ರಾಧಿಕಾರವು ಗಡಿಪಾರು ಮಾಡಿತ್ತು. ಅಮೆರಿಕಕ್ಕೆ ಅಕ್ರಮವಾಗಿ ನುಸುಳಲು ಯತ್ನಿಸಿದವರಾಗಿದ್ದರು ಇವರು.
ಇದನ್ನೂ ಓದಿ:311 ಭಾರತೀಯರ ಗಡಿಪಾರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.