ADVERTISEMENT

ಭಾರತದ ಮಾಂಸಾಹಾರ ಎಂದರೆ ಪಂಚಪ್ರಾಣ: ಭೇಟಿಗೆ ತುದಿಗಾಲ ಮೇಲೆ ನಿಂತ ವಿಶ್ವಸುಂದರಿ ಕರೊಲಿನಾ

ಪಿಟಿಐ
Published 13 ಜೂನ್ 2023, 10:47 IST
Last Updated 13 ಜೂನ್ 2023, 10:47 IST
   

ಮುಂಬೈ: ಚಿಕನ್ ಟಿಕ್ಕಾದಿಂದ ಕಲರ್‌ಫುಲ್ ಬಾಲಿವುಡ್‌ ಸಿನಿಮಾವರೆಗೆ ಹಲವು ವಿಷಯಗಳು ವಿಶ್ವ ಸುಂದರಿ ಕರೊಲಿನಾ ಬಿಯಾಲವಸ್ಕಾ ಅವರ ಭಾರತ ಭೇಟಿಯ ಪಟ್ಟಿಯಲ್ಲಿವೆ.

ಭಾರತದಲ್ಲಿ ಈ ವರ್ಷಾಂತ್ಯಕ್ಕೆ ನಡೆಯಲಿರುವ 71ನೇ ವಿಶ್ವಸುಂದರಿ ಸ್ಪರ್ಧೆಗೆ ಆಗಮಿಸಲಿರುವ ಅವರು, ಅದಾಗಲೇ ಭಾರತದಲ್ಲಿ ತಮ್ಮ ಇಷ್ಟದ ಮಾಂಸಾಹಾರ ತಿನ್ನುವ, ಬಾಲಿವುಡ್ ಸಿನಿಮಾಗಳನ್ನು ನೋಡುವ ಮತ್ತು ಇಷ್ಟದ ಪ್ರದೇಶಗಳಿಗೆ ಭೇಟಿ ನೀಡುವ ಬಗ್ಗೆ ಪಟ್ಟಿ ಮಾಡಿಕೊಂಡಿದ್ದಾರೆ.

ರುಚಿಕರವಾದ ಭಾರತದ ಮಾಂಸಾಹಾರಗಳ ಅಭಿಮಾನಿ ಎಂದು ಹೇಳಿಕೊಂಡಿರುವ ಪಾಲಿಶ್ ಮಾಡಲ್, ಜಾಗತಿಕ ಮಟ್ಟದ ಅತಿಥಿ ಸತ್ಕಾರದ ಮೂಲಕ ಭಾರತದಲ್ಲಿ ವಿಶ್ವಸುಂದರಿ ಸ್ಪರ್ಧೆ ಅದ್ಬುತವಾಗಿ ನಡೆಯಲಿದೆ ಎಂದು ಹೇಳಿದ್ದಾರೆ. ಅಲ್ಲದೆ, ಭಾರತದ ಭೇಟಿ ವೇಳೆ ಡಯಟ್ ವರ್ಕ್ ಆಗಲ್ಲ ಎಂದಿದ್ದಾರೆ.

ADVERTISEMENT

‘ನಾನು ಚಿಕನ್ ಟಿಕ್ಕಾ ಮಸಾಲದ ದೊಡ್ಡ ಅಭಿಮಾನಿಯಾಗಿದ್ದು, ಬಟರ್ ಚಿಕನ್ ಸಹ ನನಗೆ ಇಷ್ಟ. ಭಾರತದಲ್ಲಿ ಪ್ರವಾಸದಲ್ಲಿರುವಾಗ ಡಯಟ್ ವರ್ಕ್ ಆಗುವುದಿಲ್ಲ. ಏಕೆಂದರೆ, ಇಲ್ಲಿನ ಆಹಾರವು ಅತ್ಯಂತ ರುಚಿಕರವಾಗಿರುತ್ತದೆ. ಬೇಕಾದ್ದನ್ನು ತಿನ್ನಬೇಕು. ನನಗೆ ಮಸಾಲೆ ಆಹಾರ ಪದಾರ್ಥಗಳು ಇಷ್ಟ’ಎಂದು ಹೇಳಿದ್ದಾರೆ.

ಭಾರತದಲ್ಲಿ ನನ್ನ ಆದ್ಯತೆಯ ಭೇಟಿಯ ಸ್ಥಳಗಳು ಮಣಿಪುರ ಮತ್ತು ಆಗ್ರಾ ಎಂದು ಅವರು ಹೇಳಿದ್ದಾರೆ.

‘ನನಗೆ ಮಣಿಪುರ ಮತ್ತು ತಾಜ್‌ಮಹಲ್ ನೋಡಲು ಆಗ್ರಾಗೆ ಭೇಟಿ ನೀಡಲು ಇಷ್ಟ. ಗೋವಾ, ಮುಂಬೈ.. ಹೀಗೆ ನಾನು ನೋಡಲು ಇಚ್ಛಿಸುವ ಹಲವು ಪ್ರದೇಶಗಳಿವೆ. ನಮ್ಮ ಒಂದು ತಿಂಗಳ ಭೇಟಿಯ ಸಮಯದಲ್ಲಿ ಆದಷ್ಟು ಪ್ರದೇಶಗಳಿಗೆ ಭೇಟಿ ನೀಡುತ್ತೇನೆ’ಎಂದು ಅವರು ಹೇಳಿದ್ದಾರೆ.

ಅವಕಾಶ ಸಿಕ್ಕರೆ, ಹಿಂದಿ ಚಿತ್ರದಲ್ಲಿ ನಟಿಸಲು ಆಸಕ್ತಿ ಇರುವುದಾಗಿ ಬಿಯಾಲವಸ್ಕಾ ಹೇಳಿದ್ದಾರೆ.

‘ನನಗೆ ಬಾಲಿವುಡ್ ಮೂವಿಗಳೆಂದರೆ ಬಹಳ ಇಷ್ಟ. ಪ್ರಿಯಾಂಕಾ ಚೋಪ್ರಾ ಬಗ್ಗೆ ನನಗೆ ತಿಳಿದಿದೆ. ಪೋಲೆಂಡ್‌ನಲ್ಲಿ ಬಾಲಿವುಡ್ ಸಿನಿಮಾ ನೋಡಲು ಸಿಗುವುದಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಇಲ್ಲಿಗೆ ಬಂದು ಸಿನಿಮಾ ನೋಡುತ್ತೇನೆ’ಎಂದು ಅವರು ಹೇಳಿದರು.

‘ಬಾಲಿವುಡ್‌ ಸಿನಿಮಾಗಳಲ್ಲಿನ ನೃತ್ಯ ಅತ್ಯಂತ ರೋಮಾಂಚಕ ಮತ್ತು ಕಲರ್‌ಫುಲ್. ಐಶ್ವರ್ಯ ರೈ ಅತ್ಯದ್ಬುತ ನಟಿಯಾಗಿದ್ದು, ಅವರಂತೆ ನನಗೂ ನೃತ್ಯ ಮಾಡಲು ಇಷ್ಟ’ಎಂದಿದ್ದಾರೆ.

Visiting amazing India on a diet not helpful Miss World Karolina Bielawska

ಮುಂಬೈ: ಚಿಕನ್ ಟಿಕ್ಕಾದಿಂದ ಕಲರ್‌ಫುಲ್ ಬಾಲಿವುಡ್‌ ಸಿನಿಮಾವರೆಗೆ ಹಲವು ವಿಷಯಗಳು ವಿಶ್ವ ಸುಂದರಿ ಕರೊಲಿನಾ ಬಿಯಾಲವಸ್ಕಾ ಅವರ ಭಾರತ ಭೇಟಿಯ ಪಟ್ಟಿಯಲ್ಲಿವೆ.

ಭಾರತದಲ್ಲಿ ಈ ವರ್ಷಾಂತ್ಯ ನಡೆಯಲಿರುವ ಒಂದು ತಿಂಗಳ 71ನೇ ವಿಶ್ವಸುಂದರಿ ಸ್ಪರ್ಧೆಗೆ ಆಗಮಿಸಲಿರುವ ಅವರು, ಅದಾಗಲೇ ಭಾರತದಲ್ಲಿ ತಮ್ಮ ಇಷ್ಟದ ತಿಂಡಿ ತಿನ್ನುವ, ಬಾಲಿವುಡ್ ಸಿನಿಮಾಗಳನ್ನು ನೋಡುವ ಮತ್ತು ಇಷ್ಟದ ಪ್ರದೇಶಗಳಿಗೆ ಭೇಟಿ ನೀಡುವ ಬಗ್ಗೆ ಪಟ್ಟಿ ಮಾಡಿಕೊಂಡಿದ್ದಾರೆ.

ರುಚಿಕರವಾದ ಭಾರತದ ಮಾಂಸಾಹಾರಗಳ ಅಭಿಮಾನಿ ಎಂದು ಹೇಳಿಕೊಂಡಿರುವ ಪಾಲಿಶ್ ಮಾಡಲ್, ಜಾಗತಿಕ ಮಟ್ಟದ ಅತಿಥಿ ಸತ್ಕಾರದ ಮೂಲಕ ಭಾರತದಲ್ಲಿ ವಿಶ್ವಸುಂದರಿ ಸ್ಪರ್ಧೆ ಅದ್ಬುತವಾಗಿ ನಡೆಯಲಿದೆ ಎಂದು ಹೇಳಿದ್ದಾರೆ. ಅಲ್ಲದೆ, ಭಾರತದ ಭೇಟಿ ವೇಳೆ ಡಯಟ್ ವರ್ಕ್ ಆಗಲ್ಲ ಎಂದಿದ್ದಾರೆ.

‘ನಾನು ಚಿಕನ್ ಟಿಕ್ಕಾ ಮಸಾಲದ ದೊಡ್ಡ ಅಭಿಮಾನಿಯಾಗಿದ್ದು, ಬಟರ್ ಚಿಕನ್ ಸಹ ನನಗೆ ಇಷ್ಟ. ಭಾರತದಲ್ಲಿ ಪ್ರವಾಸದಲ್ಲಿರುವಾಗ ಡಯಟ್ ವರ್ಕ್ ಆಗುವುದಿಲ್ಲ. ಏಕೆಂದರೆ, ಇಲ್ಲಿನ ಆಹಾರವು ಅತ್ಯಂತ ರುಚಿಕರವಾಗಿರುತ್ತದೆ. ಬೇಕಾದ್ದನ್ನು ತಿನ್ನಬೇಕು. ನನಗೆ ಮಸಾಲೆ ಆಹಾರ ಪದಾರ್ಥಗಳು ಇಷ್ಟ’ಎಂದು ಹೇಳಿದ್ದಾರೆ.

ಭಾರತದಲ್ಲಿ ನನ್ನ ಆದ್ಯತೆಯ ಭೇಟಿಯ ಸ್ಥಳಗಳು ಮಣಿಪುರ ಮತ್ತು ಆಗ್ರಾ ಎಂದು ಅವರು ಹೇಳಿದ್ದಾರೆ.

‘ನನಗೆ ಮಣಿಪುರ ಮತ್ತು ತಾಜ್‌ಮಹಲ್ ನೋಡಲು ಆಗ್ರಾಗೆ ಭೇಟಿ ನೀಡಲು ಇಷ್ಟ. ಗೋವಾ, ಮುಂಬೈ.. ಹೀಗೆ ನಾನು ನೋಡಲು ಇಚ್ಛಿಸುವ ಹಲವು ಪ್ರದೇಶಗಳಿವೆ. ನಮ್ಮ ಒಂದು ತಿಂಗಳ ಭೇಟಿಯ ಸಮಯದಲ್ಲಿ ಆದಷ್ಟು ಪ್ರದೇಶಗಳಿಗೆ ಭೇಟಿ ನೀಡುತ್ತೇನೆ’ಎಂದು ಅವರು ಹೇಳಿದ್ದಾರೆ.

ಅವಕಾಶ ಸಿಕ್ಕರೆ, ಹಿಂದಿ ಚಿತ್ರದಲ್ಲಿ ನಟಿಸಲು ಆಸಕ್ತಿ ಇರುವುದಾಗಿ ಬಿಯಾಲವಸ್ಕಾ ಹೇಳಿದ್ದಾರೆ.

‘ನನಗೆ ಬಾಲಿವುಡ್ ಮೂವಿಗಳೆಂದರೆ ಬಹಳ ಇಷ್ಟ. ಪ್ರಿಯಾಂಕಾ ಚೋಪ್ರಾ ಬಗ್ಗೆ ನನಗೆ ತಿಳಿದಿದೆ. ಪೋಲೆಂಡ್‌ನಲ್ಲಿ ಬಾಲಿವುಡ್ ಸಿನಿಮಾ ನೋಡಲು ಸಿಗುವುದಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಇಲ್ಲಿಗೆ ಬಂದು ಸಿನಿಮಾ ನೋಡುತ್ತೇನೆ’ಎಂದು ಅವರು ಹೇಳಿದರು.

‘ಬಾಲಿವುಡ್‌ ಸಿನಿಮಾಗಳಲ್ಲಿನ ನೃತ್ಯ ಅತ್ಯಂತ ರೋಮಾಂಚಕ ಮತ್ತು ಕಲರ್‌ಫುಲ್. ಐಶ್ವರ್ಯ ರೈ ಅತ್ಯದ್ಬುತ ನಟಿಯಾಗಿದ್ದು, ಅವರಂತೆ ನನಗೂ ಅವರು ನೃತ್ಯ ಮಾಡಲು ಇಷ್ಟ’ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.