ADVERTISEMENT

ವೈಝಾಗ್‌ ಅನಿಲ ದುರಂತ: FIRನಲ್ಲಿ ಏನಿದೆ?

ಏಜೆನ್ಸೀಸ್
Published 13 ಮೇ 2020, 9:10 IST
Last Updated 13 ಮೇ 2020, 9:10 IST
ಅನಿಲ ಸೋರಿಕೆ ಚಿತ್ರ
ಅನಿಲ ಸೋರಿಕೆ ಚಿತ್ರ   

ವಿಶಾಖಪಟ್ಟಣ:ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ (ವೈಝಾಗ್‌) ಎಲ್‌ಜಿ ಪಾಲಿಮರ್ಸ್‌ ಕಾರ್ಖಾನೆಯಲ್ಲಿಅನಿಲ ಸೋರಿಕೆಯಾಗಿ11 ಜನಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆಪೊಲೀಸ್‌ ಠಾಣೆಯಲ್ಲಿಎಫ್‌ಐಆರ್‌ ದಾಖಲಾಗಿದ್ದು ಕಾರ್ಖಾನೆಸಿಬ್ಬಂದಿಯ ಯಾರೊಬ್ಬರಹೆಸರೂಉಲ್ಲೇಖವಾಗಿಲ್ಲ.

ಗ್ಯಾಸ್‌ ಸೋರಿಕೆ ಸಂಬಂಧ ಆಂಧ್ರಪ್ರದೇಶ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡಿದೆ. ಇಲ್ಲಿನ ಗೋಪಾಲಪಟ್ಟಣಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ..

ಪೊಲೀಸ್‌ ದಾಖಲೆಗಳ ಪ್ರಕಾರಅನಿಲ ಸೋರಿಕೆಯಾಗಿ 5 ಗಂಟೆಗಳ ನಂತರ ದೂರು ದಾಖಲಾಗಿದೆ. ಅಂದು7 ಗಂಟೆಗೆ ಎಫ್‌ಐಆರ್‌ ದಾಖಲಾಗಿದ್ದು ಅದರಲ್ಲಿ ‘ಕಾಖಾರ್ನೆಯಿಂದ ಸ್ವಲ್ಪ ಹೊಗೆ ಬಂತು, ಅದು ಕೆಟ್ಟ ವಾಸನೆಯಿಂದ ಕೂಡಿತ್ತು. ಆಹೊಗೆ ಜೀವಕ್ಕೆ ಹಾನಿಕಾರಕ ಎಂದು ಬರೆಯಲಾಗಿದೆ.ಬೆಳಗ್ಗೆ 3.30ರ ಸುಮಾರಿಗೆ ಕಾರ್ಖಾನೆಯಿಂದ ಅನಿಲ ಸೋರಿಕೆಯಾಗಿ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ತೊಂದರೆಯಾಯಿತು. ಕೆಟ್ಟ ವಾಸನೆಯಿಂದಾಗಿಜನರು ಮನೆಯಿಂದ ಹೊರಗೆ ಬಂದರು.

ಪ್ರಜ್ಞೆ ತಪ್ಪಿದ್ದಹಾಗೂನಿತ್ರಾಣಗೊಂಡವರನ್ನುಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ5 ಜನ ಸಾವನ್ನಪ್ಪಿದ್ದಾರೆ ಎಂದು 7 ಗಂಟೆ ಸುಮಾರಿಗೆ ದಾಖಲಾದ ಎಫ್‌ಐಆರ್‌ನಲ್ಲಿಬರೆಯಲಾಗಿದೆ. ಆದರೆ ಆ ಸಮಯಕ್ಕೆ 10 ಜನಮೃತಪಟ್ಟಿರುವುದು ದೃಢಪಟ್ಟಿತ್ತು.

ಬೆಳಗ್ಗೆ 7 ಗಂಟೆ ಸುಮಾರಿಗೆ ಸ್ಟೈರೀನ್‌ ಗ್ಯಾಸ್‌ ಸೋರಿಕೆಯಾಗಿದೆ ಎಂಬುದನ್ನುಪೊಲೀಸರೇ ದೃಢಪಡಿಸಿದ್ದರೂ ಆ ವೇಳೆ ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಿರಲಿಲ್ಲ. ಹಾಗೇ ಅನಿಲ ಸೋರಿಕೆಕಂಪನಿಯ ಹೆಸರನ್ನು ನಮೂದಿಸಿರಲಿಲ್ಲ. ಒಟ್ಟು 6ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣದಾಖಲು ಮಾಡಲಾಗಿದೆ. ಸೆಕ್ಷನ್‌‌ 278 (ಆರೋಗ್ಯಕ್ಕೆ ಪೂರಕವಾಗಿರುವವಾತಾವರಣವಿಷಪೂರಿತ ಗೊಳಿಸುವುದು),ಸೆಕ್ಷನ್‌ 284 (ವಿಷಕಾರಿ ವಸ್ತುಗಳನ್ನು ನಿಯಂತ್ರಿಸುವಲ್ಲಿ ನಿರ್ಲಕ್ಷ್ಯ), 285 ಸೆಕ್ಷನ್‌(ರಾಸಾಯನಿಕಗಳ ಮೂಲಕ ಜೀವಕ್ಕೆ ಕುತ್ತು ತರುವುದು), ಸೆಕ್ಷನ್‌ 337 (ಇತರರ ಜೀವ ಹಾನಿ ಹಾಗೂ ವೈಯಕ್ತಿಕ ಸುರಕ್ಷತೆಗೆ ಧಕ್ಕೆ ತರುವುದು) ಸೆಕ್ಷನ್‌ 304–4( ಸಾವು ಸಂಭವಿಸುತ್ತದೆ ಎಂದು ತಿಳಿದಿದ್ದರೂ ನಿರ್ಲಕ್ಷ್ಯ)ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.

ಘಟನೆ ಸಂಭವಿಸಿದಾಗ ಕಾರ್ಖಾನೆಯಲ್ಲಿ24 ಸಿಬ್ಬಂದಿಕೆಲಸ ಮಾಡುತ್ತಿದ್ದರು. ಅವರಲ್ಲಿ ಕೆಲವರು ಎಂಜಿನಿಯರ್‌ಗಳು ಇದ್ದರು. ಆದರೆ ಅವರಿಗೆ ಪರಿಸ್ಥಿತಿ ನಿಭಾಯಿಸುವ ಅನುಭವ ಇರಲಿಲ್ಲ ಎಂದು ಕಾರ್ಖಾನೆಯ ಮುಖ್ಯ ಇನ್ಸ್‌ಪೆಕ್ಟರ್‌ ಶಿವಶಂಕರ್‌ ರೆಡ್ಡಿ ಹೇಳಿದ್ದಾರೆ. ಹಾಗೇ ಲಾಕ್‌ಡೌನ್‌ ಬಳಿಕ ಕಾರ್ಖಾನೆಯನ್ನು ಮತ್ತೆಸುರಕ್ಷಿತವಾಗಿ ತೆರೆಯಲಾಗುವುದು ಎಂದು ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ನ್ಯೂಸ್‌ ವೆಬ್‌ಸೈಟ್‌ಗೆತಿಳಿಸಿದ್ದಾರೆ.

ಘಟನೆ ಸಂಬಂಧ ಎಫ್‌ಐಆರ್‌ನಲ್ಲಿ ಕಾರ್ಖಾನೆ ಸಿಬ್ಬಂದಿ ಪೈಕಿಯಾರು ಹೆಸರನ್ನು ಉಲ್ಲೇಖ ಮಾಡಿಲ್ಲ ಎಂದು ವಿಶಾಖಪಟ್ಟಣ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ಮೀನಾಅವರನ್ನು ಕೇಳಿದಾಗ, ಕಾರ್ಖಾನೆಯಲ್ಲಿ ಕೆಲಸ ನಡೆಯುತ್ತಿರುವ ಸಂದರ್ಭದಲ್ಲಿ ದುರಂತ ಸಂಭವಿಸಿದೆ. ಅಲ್ಲಿ ಇದ್ದವರುಈ ದುರಂತಕ್ಕೆ ಜವಾಬ್ದಾರರು. ಅಲ್ಲಿ ಯಾರು ಯಾವ ಕೆಲಸ ಮಾಡುತ್ತಿದ್ದರು ಎಂಬುದನ್ನು ಉನ್ನತ ಮಟ್ಟದ ತನಿಖಾ ಸಂಸ್ಥೆ ಪತ್ತೆ ಹಚ್ಚಲಿದೆ. ಈಗಾಗಲೇ ಕಂಪನಿ ಮುಖ್ಯಸ್ಥರು ಹಾಗೂ ಕಾರ್ಖಾನೆಯ ತಾಂತ್ರಿಕ ಸಲಹೆಗಾರರಿಗೂ ಇ–ಮೇಲ್‌ ಮಾಡಲಾಗಿದೆ ಎಂದು ರಾಜೀವ್‌ ಕುಮಾರ್‌ ಮೀನಾ ಪ್ರತಿಕ್ರಿಯೆನೀಡಿದ್ದಾರೆಎಂದು ದಿಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.