ADVERTISEMENT

ಇವಿಎಂನಲ್ಲಿ ಬ್ರೈಲ್‌ ಲಿಪಿ ಇರಲಿ: ಸಬಲೀಕರಣ ಸಚಿವಾಲಯ –ಚುನಾವಣಾ ಆಯೋಗ ಚರ್ಚೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 4:32 IST
Last Updated 19 ಆಗಸ್ಟ್ 2022, 4:32 IST
ಇವಿಎಂ ಮತ್ತು ವಿವಿಪ್ಯಾಟ್
ಇವಿಎಂ ಮತ್ತು ವಿವಿಪ್ಯಾಟ್   

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ಬ್ರೈಲ್‌ ಲಿಪಿಯನ್ನು ಅಳವಡಿಸುವ ಮತ್ತು ಅಂಗವಿಕಲರಿಗೆ ಮನೆಯಲ್ಲೇ ಮತದಾನದ ಅವಕಾಶ ಕಲ್ಪಿಸುವ ಸಂಬಂಧ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ಚುನಾವಣಾ ಆಯೋಗದ ಮಧ್ಯೆ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ.

ಚುನಾವಣಾ ಪ್ರಕ್ರಿಯೆಯನ್ನು ಅಂಗವಿಕಲ ಸ್ನೇಹಿಯನ್ನಾಗಿಸುವ ಸಂಬಂಧ ಏರ್ಪಡಿಸಲಾಗಿದ್ದ ಸಭೆಯಲ್ಲಿ ಈ ವಿಚಾರಗಳು ಚರ್ಚೆಗೆ ಬಂದಿವೆ. ಇವಿಎಂಗಳಲ್ಲಿ ಮತ್ತು ಮತದಾರರ ಗುರುತಿನ ಚೀಟಿಗಳಲ್ಲಿ ಬ್ರೈಲ್‌ ಲಿಪಿಯನ್ನು ಅಳವಡಿಸುವ ಸಲಹೆಯನ್ನು ಸಭೆಯಲ್ಲಿ ನೀಡಲಾಗಿದ್ದು, ಪರಿಶೀಲಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.