ADVERTISEMENT

ಅಗಸ್ಟಾ ವೆಸ್ಟ್‌ಲ್ಯಾಂಡ್: ಕ್ರಿಶ್ಚಿಯನ್‌ ಮಿಷೆಲ್‌ ಕಸ್ಟಡಿ ಅವಧಿ 4 ದಿನ ವಿಸ್ತರಣೆ

ವಿವಿಐಪಿ ಹೆಲಿಕಾಪ‍್ಟರ್‌ ಖರೀದಿ ಪ್ರಕರಣ

ಪಿಟಿಐ
Published 15 ಡಿಸೆಂಬರ್ 2018, 11:26 IST
Last Updated 15 ಡಿಸೆಂಬರ್ 2018, 11:26 IST
ಕ್ರಿಶ್ಚಿಯನ್‌ ಮಿಷೆಲ್‌
ಕ್ರಿಶ್ಚಿಯನ್‌ ಮಿಷೆಲ್‌   

ನವದೆಹಲಿ:ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್‌ ಮಿಷೆಲ್‌ ಅವರ ಕಸ್ಟಡಿ ಅವಧಿಯನ್ನು ಮತ್ತೆ ನಾಲ್ಕು ದಿನ ವಿಸ್ತರಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ.

57 ವರ್ಷದ ಬ್ರಿಟಿಷ್‌ ದೇಶದ ಮಿಷೆಲ್‌ ಅವರನ್ನು ವಿಶೇಷ ನ್ಯಾಯಾಧೀಶ ಅರವಿಂದ್‌ ಕುಮಾರ್‌ ಮುಂದೆ ಹಾಜರುಪಡಿಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಲವಾರು ದಾಖಲೆಗಳ ಬಗ್ಗೆ ಮಿಷೆಲ್‌ ಅವರಿಂದ ಮಾಹಿತಿ ಪಡೆಯಬೇಕಿದ್ದು, ಕಸ್ಟಡಿ ಅವಧಿಯನ್ನು ವಿಸ್ತರಿಸುವಂತೆ ಸಿಬಿಐ ಅಧಿಕಾರಿಗಳು ಮನವಿ ಮಾಡಿದರು. ಇದಕ್ಕೆ ನ್ಯಾಯಾಧೀಶರು ಸಮ್ಮತಿಸಿದ್ದಾರೆ.

ಕ್ರಿಶ್ಚಿಯನ್‌ ಅವರನ್ನು ಡಿಸೆಂಬರ್‌ 4ರಂದು ಸಂಯುಕ್ತ ಅರಬ್‌ ಒಕ್ಕೂಟದಲ್ಲಿ ಬಂಧಿಸಿ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು.

ADVERTISEMENT

ಗಣ್ಯರ ಬಳಕೆ ಹೆಲಿಕಾಪ್ಟರ್ ಖರೀದಿ ಯಲ್ಲಿ ಯುಪಿಎ ಅವಧಿಯಲ್ಲಿ ನಡೆದಿದೆ ಎನ್ನಲಾದ ₹3,600 ಕೋಟಿ ಮೊತ್ತದ ಹಗರಣದಲ್ಲಿ ಮಿಷೆಲ್‌ ಭಾರತಕ್ಕೆ ಬೇಕಾಗಿದ್ದರು. ಈ ಹೆಲಿಕಾಪ್ಟರ್‌ ಖರೀದಿಯಲ್ಲಿ ಮೈಕೆಲ್‌ ಸುಮಾರು ₹225 ಕೋಟಿ ಮೊತ್ತವನ್ನು ಮಿಷೆಲ್‌ ಲಂಚ ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯವು 2016ರ ಜೂನ್‌ ತಿಂಗಳಲ್ಲಿ ದೋಷಾರೋಪ ಪಟ್ಟಿ ದಾಖಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.