ADVERTISEMENT

ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣ: ಇ.ಡಿ ವಶಕ್ಕೆ ಮಿಷೆಲ್‌

ಪಿಟಿಐ
Published 22 ಡಿಸೆಂಬರ್ 2018, 20:12 IST
Last Updated 22 ಡಿಸೆಂಬರ್ 2018, 20:12 IST
ಕ್ರಿಶ್ಚಿಯನ್‌ ಮಿಷೆಲ್‌
ಕ್ರಿಶ್ಚಿಯನ್‌ ಮಿಷೆಲ್‌   

ನವದಹಲಿ: ಸಿಬಿಐ ವಶದಲ್ಲಿರುವ ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್‌ ಮಿಷೆಲ್‌ ಅವರನ್ನು ದೆಹಲಿ ಕೋರ್ಟ್‌ ಏಳು ದಿನ ಜಾರಿ ನಿರ್ದೇಶನಾಯದ (ಇ.ಡಿ) ವಶಕ್ಕೆ ಒಪ್ಪಿಸಿದೆ.

ಜಾಮೀನು ಕೋರಿ ಮಿಷೆಲ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಶನಿವಾರ ವಜಾಗೊಳಿಸಿದೆ.

ಇದಕ್ಕೂ ಮುನ್ನ ಅಕ್ರಮ ಹಣ ವರ್ಗಾವಣೆ ಪ್ರಕರಣ ವಿಚಾರಣೆಗೆ ಮಿಷೆಲ್‌ ಅವರನ್ನು 15 ದಿನ ತನ್ನ ವಶಕ್ಕೆ ನೀಡುವಂತೆ ಕೋರಿ ಇ.ಡಿ ದೆಹಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ADVERTISEMENT

ಯುಪಿಎ ಅವಧಿಯಲ್ಲಿ ಗಣ್ಯರ ಬಳಕೆಯ ಹೆಲಿಕಾಪ್ಟರ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ₹3,600 ಕೋಟಿ ಮೊತ್ತದ ಹಗರಣದಲ್ಲಿ ಮಿಷೆಲ್‌ ಭಾರತಕ್ಕೆ ಬೇಕಾಗಿದ್ದರು.

ಮಿಷೆಲ್‌ ಲಂಚ ಪಡೆದಿದ್ದಾರೆ ಎಂದು ಇ.ಡಿ 2016ರ ಜೂನ್‌ ತಿಂಗಳಲ್ಲಿ ಆರೋಪ ಪಟ್ಟಿ ದಾಖಲಿಸಿತ್ತು. ಮಿಷೆಲ್‌ ಅವರನ್ನು 2018ರ ಡಿಸೆಂಬರ್‌ 4ರಂದು ಸಂಯುಕ್ತ ಅರಬ್‌ ಒಕ್ಕೂಟ ಭಾರತಕ್ಕೆ ಗಡಿಪಾರು ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.