ADVERTISEMENT

ಭಾರತದ ‘ವ್ಯಾಗ್ನರ್ ಗುಂಪು’ ಮೋದಿ ಸರ್ಕಾರವನ್ನು ಕಿತ್ತೊಗೆಯಲಿದೆ: ಶಿವಸೇನಾದ ಉದ್ಧವ್ ಬಣ

‘ಸಾಮ್ನಾ’ ಸಂಪಾದಕೀಯದಲ್ಲಿ ಶಿವಸೇನಾದ ಉದ್ಧವ್ ಬಣ ಪ್ರತಿಪಾದನೆ

ಪಿಟಿಐ
Published 26 ಜೂನ್ 2023, 16:06 IST
Last Updated 26 ಜೂನ್ 2023, 16:06 IST
ನರೇಂದ್ರ ಮೋದಿ ಮತ್ತು ಉದ್ಧವ್ ಠಾಕ್ರೆ
ನರೇಂದ್ರ ಮೋದಿ ಮತ್ತು ಉದ್ಧವ್ ಠಾಕ್ರೆ   

ಮುಂಬೈ: ಭಾರತದ ‘ವ್ಯಾಗ್ನರ್ ಗುಂಪು’ ಅಂದರೆ ವಿರೋಧ ಪಕ್ಷಗಳು ಅಹಿಂಸಾ ಮಾರ್ಗದಲ್ಲಿ ಮತಪೆಟ್ಟಿಗೆಯ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಕಿತ್ತೊಗೆಯಲಿವೆ ಎಂದು ಶಿವಸೇನಾದ ಉದ್ಧವ್ ಠಾಕ್ರೆ ಬಣ ಸೋಮವಾರ ಪ್ರತಿಪಾದಿಸಿದೆ. 

ಶಿವಸೇನಾದ (ಯುಬಿಟಿ) ಮುಖವಾಣಿಯಾಗಿರುವ ‘ಸಾಮ್ನಾ’ದ ಸಂಪಾದಕೀಯದಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ವಿರುದ್ಧ ದಂಗೆ ಎದ್ದ ವ್ಯಾಗ್ನರ್ ಗುಂಪು ಹಾಗೂ ಕಳೆದ ವಾರ ಪಟ್ನಾದಲ್ಲಿ ನಡೆದ ವಿರೋಧಪಕ್ಷಗಳ ಸಭೆಯ ನಡುವಿನ ಸಮಾನ ಅಂಶಗಳ ಬಗ್ಗೆ ಗಮನ ಸೆಳೆಯಲಾಗಿದೆ.

ಪಟ್ನಾದಲ್ಲಿ ಈಚೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆಯೋಜಿಸಿದ್ದ ವಿರೋಧಪಕ್ಷಗಳ ಸಭೆಯಲ್ಲಿ 32ಕ್ಕೂ ಹೆಚ್ಚಿನ ನಾಯಕರು ಪಾಲ್ಗೊಂಡಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಒಗ್ಗಟ್ಟಿನಿಂದ ಎದುರಿಸಲು ನಿರ್ಧರಿಸಿರುವ ಕುರಿತೂ ಸಂಪಾದಕೀಯದಲ್ಲಿ ಪ್ರಸ್ತಾಪಿಸಲಾಗಿದೆ.

ADVERTISEMENT

‘ಭಾರತದಲ್ಲಿರುವ ವಿರೋಧಪಕ್ಷಗಳ ‘ವ್ಯಾಗ್ನರ್ ಗುಂಪು’ ಸರ್ವಾಧಿಕಾರದ ಸವಾಲುಗಳನ್ನು ಎದುರಿಸಬಹುದು. ಅದು ಮೋದಿ ಆಗಿರಲಿ ಅಥವಾ ಪುಟಿನ್ ಆಗಿರಲಿ, ದಂಗೆಯನ್ನು ಎದುರಿಸಬೇಕಾಗುತ್ತದೆ. ಭಾರತದಲ್ಲಿ ಮೋದಿ ನೇತೃತ್ವದ ಸರ್ಕಾರವನ್ನು ಅಹಿಂಸಾತ್ಮಕ ಮಾರ್ಗದಲ್ಲಿ ‘ವ್ಯಾಗ್ನಾರ್ ಗುಂ‍ಪು’ ಕಿತ್ತೊಗೆಯಲಿದೆ. ಪುಟಿನ್ ಅವರಂತೆ ಮೋದಿಯೂ ಹೋಗಬೇಕು. ಆದರೆ, ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋಗಬೇಕು’ ಎಂದು ಶಿವಸೇನಾ (ಯುಬಿಟಿ) ಹೇಳಿದೆ.

‘2024ರ ಚುನಾವಣಾ ಫಲಿತಾಂಶವನ್ನು ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ನಿರ್ಧರಿಸುವುದಿಲ್ಲ. ಜನತೆ ನಿರ್ಧರಿಸುತ್ತದೆ. ಒಂದು ವೇಳೆ ಇವಿಎಂ ಹಗರಣ ನಡೆದರೆ ಇಡೀ ದೇಶದಲ್ಲಿ ಮಣಿಪುರದಂಥ ಪರಿಸ್ಥಿತಿ ನಿರ್ಮಾಣವಾಗಲಿದೆ. ಜನರು ಸರ್ಕಾರದ ವಿರುದ್ಧ ಅಷ್ಟೊಂದು ಆಕ್ರೋಶಭರಿತರಾಗಿದ್ದಾರೆ’ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.