ADVERTISEMENT

ರಾಮ ಮಂದಿರ ನಿರ್ಮಾಣಕ್ಕೆ ಇನ್ನೆಷ್ಟು ವರ್ಷ ಬೇಕು: ಉದ್ಧವ್ ಠಾಕ್ರೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2018, 13:27 IST
Last Updated 24 ನವೆಂಬರ್ 2018, 13:27 IST
   

ಲಕ್ಷ್ಮಣ್ ಕಿಲಾ: ಇಂದು ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಸರ್ಕಾರ ಸಶಕ್ತವಾಗಿದೆ.ಅಯೋಧ್ಯೆಯಲ್ಲಿ ಯಾವಾಗ ರಾಮ ಮಂದಿರ ನಿರ್ಮಾಣ ಆಗುತ್ತದೆ? ದಿನಾಂಕ ಹೇಳಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಇನ್ನೆಷ್ಟು ವರ್ಷ ಕಾಯಬೇಕು?ದಿನ, ತಿಂಗಳು, ವರ್ಷಗಳು, ತಲೆಮಾರುಗಳೇ ಕಳೆದವು, ಮಂದಿರ್ ವಹೀ ಬನಾಯೇಂಗೇ , ಪರ್ ಡೇಟ್ ನಹೀ ಬತಾಯೇಂಗೆ (ಮಂದಿರ ಅಲ್ಲಿಯೇ ನಿರ್ಮಿಸುತ್ತೀವಿ ಎಂದು ಹೇಳುತ್ತೀದ್ದೀರಿ, ಆದರೆ ದಿನಾಂಕ ಹೇಳುತ್ತಿಲ್ಲ). ರಾಮ ಮಂದಿರ ಯಾವಾಗ ನಿರ್ಮಿಸುತ್ತೀರಿ ಎಂಬುದನ್ನು ಮೊದಲು ಹೇಳಿ.ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಇದು ಸ್ವಲ್ಪ ಕಷ್ಟದ ಕೆಲಸ ಆಗಿತ್ತು.ಆದರೆ ಇಂದು ಸರ್ಕಾರ ಸಶಕ್ತವಾಗಿದೆ.ನೀವು ಸುಗ್ರೀವಾಜ್ಞೆ ತರುವುದಾದರೆ ತನ್ನಿ ಅಥವಾ ಕಾನೂನು ರೂಪಿಸುವುದಾದರೆ ಅದನ್ನು ರೂಪಿಸಿ ಎಂದು ಎಂದಿದ್ದಾರೆ ಠಾಕ್ರೆ.

ಶನಿವಾರ ಸಂಜೆ ಎರಡು ದಿನದ ಭೇಟಿಗಾಗಿ ಅಯೋಧ್ಯೆಗೆ ಬಂದಿಳಿದ ಠಾಕ್ರೆ, ರಾಮ ಮಂದಿರ ನಿರ್ಮಾಣಕ್ಕಾಗಿ ಇನ್ನೆಷ್ಟು ವರ್ಷ ಕಾಯಬೇಕು? ಎಂದು ಪ್ರಶ್ನಿಸಿದ್ದಾರೆ.

ಸಂಜೆ 6 ಗಂಟೆಗೆಸರಯೂ ನದಿ ತೀರದಲ್ಲಿ ಠಾಕ್ರೆ ಮಹಾ ಆರತಿ ಮಾಡಿದ್ದಾರೆ. ಠಾಕ್ರೆ ಅಯೋಧ್ಯೆಗೆ ಭೇಟಿ ಹಿನ್ನೆಲೆಯಲ್ಲಿ12 ವಿಭಾಗ್ ಪ್ರಮುಖ್/ ವಿಭಾಗ್ ಸಂಘಟಕ್ (ಪಕ್ಷದ ಪದಾಧಿಕಾರಿಗಳು) ಸಂಜೆ 6 ಗಂಟೆಗೆ ಮುಂಬೈಯ ವಿವಿಧ ದೇವಾಲಯಗಳಲ್ಲಿ ಮಹಾ ಆರತಿ ಮಾಡಿದ್ದಾರೆ.

ADVERTISEMENT

ಕ್ಷಣ ಕ್ಷಣದ ಸುದ್ದಿ

ಅಗತ್ಯ ಬಂದರೆ ಸೇನಾಪಡೆ ನಿಯೋಜಿಸಲಾಗುವುದು: ಅಖಿಲೇಶ್ ಯಾದವ್
ಭಾನುವಾರ ಅಯೋಧ್ಯೆಯಲ್ಲಿ ಧರಂ ಸಭಾ ನಡೆಯಲಿದ್ದು, ಅಗತ್ಯ ಬಂದರೆ ಸೇನಾಪಡೆ ನಿಯೋಜಿಸಲಾಗುವುದು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಉತ್ತರ ಪ್ರದೇಶದ ಪರಿಸ್ಥಿತಿ ಬಗ್ಗೆ ಸುಪ್ರೀಂಕೋರ್ಟ್ ಗಮನ ಹರಿಸಬೇಕು, ಬಿಜೆಪಿ ಮತ್ತು ಅವರ ಮೈತ್ರಿ ಪಕ್ಷಗಳು ಏನು ಬೇಕಾದರೂ ಮಾಡಬಹುದು. ಹಾಗಾಗಿ ಅಗತ್ಯ ಬಂದರೆ ಸೇನಾ ಪಡೆಯನ್ನು ನಿಯೋಜಿಸುವ ತೀರ್ಮಾನವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದಿದ್ದಾರೆ ಅಖಿಲೇಶ್.

* ಲಕ್ಷಣ್ ಕಿಲಾಗೆ ಭೇಟಿ ನೀಡಿದ ಠಾಕ್ರೆ ಈ ಭೇಟಿ ರಾಜಕೀಯ ಅಲ್ಲ ಎಂದು ಹೇಳಿದ್ದಾರೆ.

*ಅಯೋಧ್ಯೆ ಪರಿಸರದಲ್ಲಿ ಡ್ರೋನ್ ಕಣ್ಗಾವಲಿರಿಸಲಾಗಿದೆ.ಉತ್ತರ ಪ್ರದೇಶದ ಶಿವಸೇನಾ ಘಟಕವು ರಾಮ ಮಂದಿರ ನಿರ್ಮಾಣಕ್ಕಾಗಿ ಬೆಳ್ಳಿಯ ಇಟ್ಟಿಗೆ ಹಸ್ತಾಂತರಿಸಲಿದೆ.ರಾಮ ಜನ್ಮಭೂಮಿ ನ್ಯಾಸ್ ಮುಖ್ಯಸ್ಥ ಮಹಂತ್ ನೃತ್ಯ ಗೋಪಾಲ್ ದಾಸ್ ಲಕ್ಷಣ್ ಕಿವಾ ಮೈದಾನಕ್ಕೆ ಆಗಮಿಸಿದ್ದಾರೆ.

*ಉದ್ದವ್ ಠಾಕ್ರೆ ವೇದ ಪಠಿಸಿ ಸನ್ಯಾಸಿಗಳಿಂದ ಆಶೀರ್ವಾದ ಪಡೆದಿದ್ದಾರೆ
* ಪೆಹಲೇ ಮಂದಿರ್, ಫಿರ್ ಸರ್ಕಾರ್ ಎಂದು ಶಿವ ಸೈನಿಕ್ ಘೋಷಣೆ ಕೂಗಿದ್ದಾರೆ.ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿ ಶಿವ ಸೈನಿಕ್ ಅಲ್ಲಿನ ಸ್ಥಳೀಯ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.

* ಅಯೋಧ್ಯೆಗಿರುವ ಎಲ್ಲ ರಸ್ತೆ ಬಂದ್
ಉದ್ಧವ್ಠಾಕ್ರೆ ಭೇಟಿ ಹಿನ್ನೆಲೆಯಲ್ಲಿ ಅಯೋಧ್ಯೆಯತ್ತ ಹೋಗುವ ಎಲ್ಲ ರಸ್ತೆಗಳನ್ನು ಸಂಚಾರ ಮುಕ್ತಗೊಳಿಸಲಾಗಿದೆ.ಫೈಜಾಬಾದ್‍ ನಿಂದ ಅಯೋಧ್ಯೆಯತ್ತ ಯಾರೂ ಬರದಂತೆ ರಸ್ತೆ ತಡೆ ಸ್ಥಾಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.