ADVERTISEMENT

ನಾನು ಭ್ರಷ್ಟನಲ್ಲ ಎನ್ನುವುದು ನನ್ನ ಪರಮ ವಿರೋಧಿಗೂ ಗೊತ್ತು: ಅರವಿಂದ ಕೇಜ್ರಿವಾಲ್

ಪಿಟಿಐ
Published 24 ಸೆಪ್ಟೆಂಬರ್ 2024, 12:42 IST
Last Updated 24 ಸೆಪ್ಟೆಂಬರ್ 2024, 12:42 IST
<div class="paragraphs"><p>ಅರವಿಂದ ಕೇಜ್ರಿವಾಲ್&nbsp;</p></div>

ಅರವಿಂದ ಕೇಜ್ರಿವಾಲ್ 

   

ಪಿಟಿಐ

ಚಂಡೀಗಢ (ಹರಿಯಾಣ): ‌‘ನನ್ನನ್ನು ಕಳ್ಳ ಎಂದು ಬಿಂಬಿಸಲು ಬಿಜೆಪಿ ಬಯಸಿದ್ದು, ಇದಕ್ಕಾಗಿಯೇ ನನ್ನ ಬಂಧನವಾಗಿತ್ತು. ಆದರೆ, ನಾನು ಭ್ರಷ್ಟನಲ್ಲ ನನ್ನ ಎಂದು ಪರಮ ವಿರೋಧಿಗೂ ತಿಳಿದಿತ್ತು’ ಎಂದು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ADVERTISEMENT

ಹರಿಯಾಣದ ರಾನಿಯಾ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ರೋಡ್‌ ಶೋ ನಡೆಸಿದ ಅವರು, ‘ಕಾರಣವೇ ಇಲ್ಲದೆ ನಾನು ಐದೂವರೆ ತಿಂಗಳು ಜೈಲಿನಲ್ಲಿ ಇರಬೇಕಾಯಿತು‘ ಎಂದು ಹೇಳಿದರು 

‘ನಾನು ಮಾಡಿದ ತಪ್ಪೇನು‘ ಎಂದು ಪ್ರಶ್ನಿಸಿದ ಅವರು, ‘10 ವರ್ಷ ದೆಹಲಿ ಮುಖ್ಯಮಂತ್ರಿಯಾಗಿ ಬಡವರ ಮಕ್ಕಳಿಗಾಗಿ ಉತ್ತಮ ಸರ್ಕಾರಿ ಶಾಲೆಗಳನ್ನು ಸ್ಥಾಪಿಸಿದೆ.  24 ಗಂಟೆ ವಿದ್ಯುತ್ ಪೂರೈಕೆ ಇರುವಂತೆ ನೋಡಿಕೊಂಡೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ಉಚಿತವಾಗಿ ವಿದ್ಯುತ್‌ ಸೌಲಭ್ಯ ಕಲ್ಪಿಸಿದೆ –ಇವೇ ನನ್ನ ತಪ್ಪುಗಳಾಗಿವೆ’ ಎಂದು ಹೇಳಿದರು.

‘ಉಚಿತ ವಿದ್ಯುತ್‌ ಸೌಲಭ್ಯದಿಂದಾಗಿ ದೆಹಲಿಯಲ್ಲಿ ಬೊಕ್ಕಸಕ್ಕೆ ತಗುಲುತ್ತಿರುವ ವೆಚ್ಚ ₹ 3000 ಕೋಟಿ. ಕಳ್ಳನಾಗಿದ್ದರೆ ಅದನ್ನು ನನ್ನ ಜೇಬಿಗೆ ಇಳಿಸುತ್ತಿದ್ದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ವಿದ್ಯುತ್‌ ದರ ದುಬಾರಿಯಾಗಿದೆ. ಹರಿಯಾಣದಲ್ಲೂ ಅದು ಉಚಿತವಲ್ಲ. ಅದು ದುಬಾರಿ. ಈಗ ಹೇಳಿ ಯಾರು ಕಳ್ಳರು’ ಎಂದು ಅವರು ಬಿಜೆಪಿ ವಿರುದ್ಧ ಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.