ADVERTISEMENT

ನೋಡಿ: ಆಗಸದಿಂದ ತೇಲಿ ಬಂದ ಭಾರತೀಯ ಯೋಧರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಮಾರ್ಚ್ 2022, 11:37 IST
Last Updated 15 ಮಾರ್ಚ್ 2022, 11:37 IST
ಆಗಸದಿಂದ ತೇಲಿ ಬಂದ ಭಾರತೀಯ ಯೋಧರು
ಆಗಸದಿಂದ ತೇಲಿ ಬಂದ ಭಾರತೀಯ ಯೋಧರು   

ಭಾರತೀಯ ಸೇನೆಯ ವಿಶೇಷ ಪಡೆಗಳು ಮತ್ತು ವಾಯುಗಾಮಿ ಸೇನಾಪಡೆಯು ವಿಮಾನದಿಂದ ಜಿಗಿಯುವ ಅಭ್ಯಾಸಗಳನ್ನು ನಡೆಸಿವೆ. ಸೇನೆಯ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಅದರ ವಿಡಿಯೊ ಮತ್ತು ಫೋಟೊಗಳನ್ನು ಹಂಚಿಕೊಳ್ಳಲಾಗಿದೆ.

ದೇಶದ ಪರ್ಯಾಯ ದ್ವೀಪ ಪ್ರದೇಶದಲ್ಲಿ ಈ ಅಭ್ಯಾಸ ನಡೆಸಲಾಗಿದೆ. ಯುದ್ಧ ಸಮಯದಲ್ಲಿ ಯಾವುದೇ ಪ್ರದೇಶದಲ್ಲಿ ಯೋಧರು ಇಳಿಯಲು ನಡೆಸುವ ಫ್ರೀ ಫಾಲ್‌ ಹಾಗೂ ಪ್ಯಾರಾಚೂಟ್‌ ಹಾಕಿಕೊಂಡು ಜಿಗಿಯುವ ತಂತ್ರಗಳ ಪ್ರಾಯೋಗಿಕ ಅಭ್ಯಾಸಗಳು ನಡೆದಿವೆ.

ವಿಮಾನದಿಂದ ಜಿಗಿಯುತ್ತಿದ್ದಂತೆ ಪ್ಯಾರಾಚೂಟ್‌ ತೆಗೆಯಬೇಕಾದ ಸಮಯ, ಒಬ್ಬರಿಗೊಬ್ಬರು ಕಾಯ್ದುಕೊಳ್ಳಬೇಕಾದ ಅಂತರ, ಆಗಸದಲ್ಲಿ ತೇಲುತ್ತ ಇಳಿಯುವಾಗ ಅನುಸರಿಸುವ ರಚನೆ,.. ಸೇರಿದಂತೆ ಹಲವು ವಿಷಯಗಳನ್ನು ಈ ಅಭ್ಯಾಸಗಳ ಮೂಲಕ ತಿಳಿಯಲಾಗುತ್ತದೆ. ಮಾರ್ಚ್‌ 14 ಮತ್ತು 15ರಂದು ಸೇನೆಯು ಈ ವಿಶೇಷ ಅಭ್ಯಾಸ ನಡೆಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.