ADVERTISEMENT

ಸಂತ್ರಸ್ತರ ನೆರವಿಗೆ ವಯನಾಡಿಗೆ ಟಿಎಂಸಿಯ ಇಬ್ಬರು ಸಂಸದರು: ಮಮತಾ ಬ್ಯಾನರ್ಜಿ

ಪಿಟಿಐ
Published 1 ಆಗಸ್ಟ್ 2024, 12:59 IST
Last Updated 1 ಆಗಸ್ಟ್ 2024, 12:59 IST
<div class="paragraphs"><p>ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ</p></div>

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

   

ಕೋಲ್ಕತ್ತ: ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಭೂಕುಸಿತಕ್ಕೆ ಸಂತಾಪ ಸೂಚಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ‘ಇದೊಂದು ಭೀಕರ ದುರಂತ’ ಎಂದು ಹೇಳಿದ್ದಾರೆ.

ಅಲ್ಲದೆ, ಮೃತರ ಕುಟುಂಬಗಳಿಗೆ ನೆರವಾಗಲು ಮತ್ತು ರಕ್ಷಣಾ ಕಾರ್ಯಕ್ಕೆ ಬೆಂಬಲ ನೀಡಲು ತೃಣಮೂಲ ಕಾಂಗ್ರೆಸ್‌ನ ಇಬ್ಬರು ಸಂಸದರನ್ನು ವಯನಾಡಿಗೆ ಕಳುಹಿಸುವುದಾಗಿ ಹೇಳಿದ್ದಾರೆ. 

ADVERTISEMENT

ಈ ಕುರಿತು ಎಕ್ಸ್‌ನಲ್ಲಿ  ಬರೆದುಕೊಂಡಿರುವ ಮಮತಾ, ‘ಮಾನವೀಯತೆ ದೃಷ್ಟಿಯಿಂದ ನೆರವಿಗಾಗಿ ಸಾಕೇತ್‌ ಗೋಖಲೆ ಮತ್ತು ಸುಶ್ಮಿತಾ ದೇವ್‌ ಅವರು ಕೇರಳಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅವರು ಅಲ್ಲಿಯೇ ಎರಡು ದಿನ ಉಳಿದುಕೊಳ್ಳಲಿದ್ದಾರೆ. ಈ ವೇಳೆ ಸಂತ್ರಸ್ತ ಕುಟುಂಬಗಳಿಗೆ ಸಹಾಯ ಮಾಡಲಿದ್ದಾರೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.