ADVERTISEMENT

Wayand Landslide: 150 ಕುಟುಂಬಗಳಿಗೆ ಮನೆ ನಿರ್ಮಿಸಲಿರುವ NSS ಸ್ವಯಂಸೇವಕರು

ಪಿಟಿಐ
Published 2 ಆಗಸ್ಟ್ 2024, 11:37 IST
Last Updated 2 ಆಗಸ್ಟ್ 2024, 11:37 IST
<div class="paragraphs"><p>ಮುಂಡಕ್ಕೈ ನಗರದಲ್ಲಿ ಭೂಕುಸಿತದಿಂದ ಹಾನಿಗೊಳಗಾದ ಮನೆ</p></div>

ಮುಂಡಕ್ಕೈ ನಗರದಲ್ಲಿ ಭೂಕುಸಿತದಿಂದ ಹಾನಿಗೊಳಗಾದ ಮನೆ

   

ರಾಯಿಟರ್ಸ್‌ ಚಿತ್ರ

ತ್ರಿಶೂರ್‌: ಭೂಕುಸಿತದಲ್ಲಿ ನೆಲೆ ಕಳೆದುಕೊಂಡವರ ಪೈಕಿ 150 ಕುಟುಂಬಗಳಿಗೆ ಎನ್‌ಎಸ್‌ಎಸ್‌ ಸ್ವಯಂಸೇವಕರು ಮನೆಯನ್ನು ನಿರ್ಮಿಸಿಕೊಡಲಿದ್ದಾರೆ ಎಂದು ಕೇರಳ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ಶುಕ್ರವಾರ ಹೇಳಿದ್ದಾರೆ.

ADVERTISEMENT

ತ್ರಿಶೂರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಕೂಡ ಎನ್‌ಎಸ್‌ಎಸ್‌ ಸ್ವಯಂ ಸೇವಕರು ಮನೆಯಿಲ್ಲದ ಸಹಪಾಠಿಗಳಿಗೆ ‘ಪ್ರೀತಿಯ ಮನೆ’ ಎನ್ನುವ ಹೆಸರಿನಡಿ ಹಲವು ಮನೆಗಳನ್ನು ನಿರ್ಮಿಸಿದ್ದಾರೆ. ಅದೇ ರೀತಿ ಭೂಕುಸಿತ ಸಂಭವಿಸಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಡಲಿದ್ದಾರೆ. ಇದು ಅವರ ದೊಡ್ಡ ಕಾರ್ಯಾಚರಣೆಯಾಗಿದೆ’ ಎಂದಿದ್ದಾರೆ.

ಕೇರಳ ವಿಶ್ವವಿದ್ಯಾಲಯ, ಹೈಯರ್‌ ಸೆಕೆಂಡರಿ ಸ್ಕೂಲ್‌, ಐಟಿಐ ಸೇರಿದಂತೆ ಕೇರಳದ ವಿವಿಧ ಶಾಲಾ–ಕಾಲೇಜುಗಳ ಎನ್‌ಎಸ್‌ಎಸ್‌ ತಂಡ ಸೇರಿ ಮನೆ ನಿರ್ಮಿಸಲಿದೆ.

ಇದರ ಜತೆಗೆ ಈ ದುರಂತದಿಂದ ಮಾನಸಿಕವಾಗಿ ಹೊರಬರಲು ಅಲ್ಲಿಯ ಜನರಿಗೆ ಕೌನ್ಸಲಿಂಗ್‌ ಮಾಡಲಿದ್ದಾರೆ. ಶಾಲಾ– ಕಾಲೇಜಿಗೆ ಮಕ್ಕಳು ಹಿಂದಿರುಗುವಂತೆ ಮಾಡಲು ಅಭಿಯಾನವನ್ನೂ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.