ADVERTISEMENT

ವಯನಾಡ್‌ ಲೋಕಸಭಾ ಉಪ ಚುನಾವಣೆ: ಬುಧವಾರ ಪ್ರಿಯಾಂಕಾ ಗಾಂಧಿ ನಾಮಪತ್ರ

ವಯನಾಡ್‌ ಲೋಕಸಭಾ ಉಪ ಚುನಾವಣೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 15:16 IST
Last Updated 21 ಅಕ್ಟೋಬರ್ 2024, 15:16 IST
<div class="paragraphs"><p>ಪ್ರಿಯಾಂಕಾ ಗಾಂಧಿ ಅವರಿಗೆ&nbsp;</p></div>

ಪ್ರಿಯಾಂಕಾ ಗಾಂಧಿ ಅವರಿಗೆ 

   

ತಿರುವನಂತಪುರ: ಕಾಂಗ್ರೆಸ್‌ ನಾಯಕಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಯನಾಡ್‌ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಅಕ್ಟೋಬರ್ 23ರಂದು ನಾಮಪತ್ರ ಸಲ್ಲಿಸಲಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ವಯನಾಡ್‌ನ ಕಲ್ಪಟ್ಟ ನಗರದಲ್ಲಿ ಬೃಹತ್‌ ರೋಡ್‌ಶೊವೊಂದನ್ನು ಯುಡಿಎಫ್‌ ಆಯೋಜಿಸಿದೆ.

ADVERTISEMENT

ಪ್ರಿಯಾಂಕಾ  ಅವರ ಸಹೋದರ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಪ್ರಿಯಾಂಕಾ ಅವರೊಂದಿಗೆ ಕೇರಳಕ್ಕೆ ಇದೇ 22ರ ಸಂಜೆ ಆಗಮಿಸಲಿದ್ದಾರೆ. 23ರ ಮಧ್ಯಾಹ್ನ 12ರರೊಳಗೆ ಪ್ರಿಯಾಂಕಾ ಅವರು ನಾಮಪತ್ರ ಸಲ್ಲಿಸಲಿದ್ದಾರೆ.

ರಾಹುಲ್‌ ಗಾಂಧಿ ಅವರು 2019ರಲ್ಲಿ ಹಾಗೂ 2024ರ ಲೋಕಸಭೆ ಚುನಾವಣೆಯಲ್ಲಿ ವಯನಾಡ್‌ನಿಂದ ಸ್ಪರ್ಧಿಸಿದ್ದರು. ಈ ವೇಳೆ ರಾಹುಲ್‌ ಅವರೊಂದಿಗೆ ಪ್ರಿಯಾಂಕಾ ಅವರು ರೋಡ್‌ ಶೊ ಹಾಗೂ ಹಲವು ರ್‍ಯಾಲಿಗಳನ್ನು ನಡೆಸಿದ್ದರು. ಆದರೆ, ಇದೇ ಮೊದಲ ಬಾರಿಗೆ ಪ್ರಿಯಾಂಕಾ ಅವರು ಸ್ವತಃ ತಾವೇ
ಅಭ್ಯರ್ಥಿಯಾಗಲು ಕೇರಳಕ್ಕೆ ಆಗಮಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.