ADVERTISEMENT

Wayanad Bypoll | ಲೋಕಸಭೆಯಲ್ಲಿ ಕ್ಷೇತ್ರಕ್ಕೆ ಇಬ್ಬರು ಸದಸ್ಯರು: ರಾಹುಲ್ ಗಾಂಧಿ

ಪಿಟಿಐ
Published 23 ಅಕ್ಟೋಬರ್ 2024, 11:47 IST
Last Updated 23 ಅಕ್ಟೋಬರ್ 2024, 11:47 IST
<div class="paragraphs"><p>ವಯನಾಡ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ರಾಹುಲ್ ಗಾಂಧಿ ಸಮಾಲೋಚನೆ</p></div>

ವಯನಾಡ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ರಾಹುಲ್ ಗಾಂಧಿ ಸಮಾಲೋಚನೆ

   

ಪಿಟಿಐ ಚಿತ್ರ

ವಯನಾಡ್: ‘ಸಂಸತ್ತಿನಲ್ಲಿ ಇಬ್ಬರು ಸದಸ್ಯರನ್ನು ಹೊಂದಲಿರುವ ದೇಶದ ಏಕೈಕ ಕ್ಷೇತ್ರವೆಂದರೆ ವಯನಾಡ್’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.

ADVERTISEMENT

‘ನನ್ನ ವಿಷಯದಲ್ಲಿ ಹೇಗೆ ಕಾಳಜಿ ತೋರಿ ಅಗತ್ಯಬಿದ್ದಾಗ ನನ್ನನ್ನು ರಕ್ಷಿಸಿದ್ದೀರೊ ಅದೇ ರೀತಿ ನನ್ನ ಸಹೋದರಿ ಪ್ರಿಯಾಂಕಾಗೂ ಕಾಳಜಿ ತೋರಿ’ ಎಂದು ವಯನಾಡ್‌ನ ಸಂಸದರೂ ಆಗಿದ್ದ ಅವರು ಗುಡ್ಡಗಾಡಿನ ಜನರಲ್ಲಿ ಮನವಿ ಮಾಡಿದರು. 

ನಾಮಪತ್ರ ಸಲ್ಲಿಸುವ ಮುನ್ನ ಪ್ರಿಯಾಂಕಾ ಅವರು ನಡೆಸಿದ ಬೃಹತ್ ರೋಡ್ ಶೋ ನಂತರ ಇಲ್ಲಿನ ಕಲ್ಪೆಟ್ಟಾದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ರಾಹುಲ್‌ ಗಾಂಧಿ ಮಾತನಾಡಿದರು.

ತಾವು ಧರಿಸಿದ್ದ ರಾಖಿಯನ್ನು ಜನರತ್ತ ತೋರಿಸಿ ‘ಇದು ನನ್ನ ಸಹೋದರಿ ಮಾಡಿರುವುದು. ಅದಾಗೆ ಮುರಿಯುವವರೆಗೂ ಅದನ್ನು ನಾನು ತೆಗೆಯುವುದಿಲ್ಲ. ಇದು ಆಕೆಗೆ ಸಹೋದರನ ರಕ್ಷಣೆಯ ಸಂಕೇತ. ಆಕೆಯನ್ನು ನೀವೆಲ್ಲರೂ ರಕ್ಷಿಸಿ ಆಕೆಗೆ ವಯನಾಡ್‌ನ ಸಮಸ್ಯೆಗಳನ್ನು ಪರಿಹರಿಸಲು ತನ್ನ ಸಂಪೂರ್ಣ ಶಕ್ತಿ ನೀಡಿ ನಿಮ್ಮನ್ನೂ ರಕ್ಷಿಸುತ್ತಾಳೆ’ ಎಂದು ರಾಹುಲ್‌ ಮನವಿ ಮಾಡಿದರು.

‘ನಮ್ಮ ತಂದೆ ಮೃತಪಟ್ಟಾಗ ನನ್ನ ತಾಯಿ ಮತ್ತು ಸೋದರಿ ಎಲ್ಲವನ್ನೂ ಕಳೆದುಕೊಂಡರು. ಆ ಕಷ್ಟ ಕಾಲದಲ್ಲಿ ನನ್ನ ತಾಯಿಯನ್ನು ಕಾಳಜಿ ಮಾಡಿದ್ದು  ಸೋದರಿ ಪ್ರಿಯಾಂಕಾನೇ. ಈಗಲೂ ಆಕೆಯೇ ನನ್ನ ತಾಯಿಯನ್ನು ಕಾಳಜಿ ಮಾಡುತ್ತಿದ್ದಾಳೆ. ತನ್ನ ಕುಟುಂಬಕ್ಕಾಗಿ ಆಕೆ ಯಾವ ತ್ಯಾಗಕ್ಕೂ ಸಿದ್ಧವಿದ್ದಾಳೆ. ಆಕೆ ವಯನಾಡ್‌ನ ಜನರನ್ನು ತನ್ನ ಕುಟುಂಬದಂತೆ ಪರಿಗಣಿಸುತ್ತಾಳೆ’ ಎಂದು ರಾಹುಲ್‌ ಹೇಳಿದರು.

‘ನನ್ನ ಸಹೋದರಿ ಗೆದ್ದರೆ ವಯನಾಡ್ ಜನರನ್ನು ಸಂಸತ್ತಿನಲ್ಲಿ ಪ್ರತಿನಿಧಿಸಲು ನಾನು ಸೇರಿ ಇಬ್ಬರು ಸಂಸದರು ಸಿಕ್ಕಂತಾಗಲಿದೆ. ಆಕೆ ಈ ಕ್ಷೇತ್ರದ ಅಧಿಕೃತ ಸಂಸದೆಯಾಗಿ ನಾನು ಈ ಕ್ಷೇತ್ರದ ಅನಧಿಕೃತ ಸಂಸದನಾಗಿ ಕ್ಷೇತ್ರದ ಜನರ ಒಳಿತಿಗೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.