ADVERTISEMENT

Wayanad Landslides | ಕೇರಳಕ್ಕೆ ಎಚ್ಚರಿಕೆ ಕೊಟ್ಟಿದ್ದೆವು: ಹವಾಮಾನ ಇಲಾಖೆ

ಪಿಟಿಐ
Published 1 ಆಗಸ್ಟ್ 2024, 14:30 IST
Last Updated 1 ಆಗಸ್ಟ್ 2024, 14:30 IST
<div class="paragraphs"><p>ವಯನಾಡ್‌ನಲ್ಲಿ ಭೂಕುಸಿತ ಸಂಭವಿಸಿದ ಸ್ಥಳದ ಡ್ರೋನ್ ಚಿತ್ರ</p></div>

ವಯನಾಡ್‌ನಲ್ಲಿ ಭೂಕುಸಿತ ಸಂಭವಿಸಿದ ಸ್ಥಳದ ಡ್ರೋನ್ ಚಿತ್ರ

   

-ರಾಯಿಟರ್ಸ್ ಚಿತ್ರ

ನವದೆಹಲಿ: ‘ಹವಾಮಾನ ಇಲಾಖೆಯು ದೇಶದ ಪಶ್ಚಿಮ ಕರಾವಳಿಯಲ್ಲಿ ಹೆಚ್ಚಿನ ಮಳೆಯಾಗುವ ಮನ್ಸೂಚನೆಯನ್ನು ನಿಯಮಿತವಾಗಿ ನೀಡುತ್ತಾ ಬಂದಿತ್ತು ಹಾಗೂ ಜುಲೈ 30ರ ಬೆಳಿಗ್ಗೆ ಕೇರಳಕ್ಕೆ ರೆಡ್‌ ಅಲರ್ಟ್‌ ಘೋಷಿಸಿತ್ತು’ ಎಂದು ಐಎಂಡಿ ಮುಖ್ಯಸ್ಥ ಮೃತ್ಯುಂಜಯ ಮಹಾಪಾತ್ರ ಹೇಳಿದ್ದಾರೆ.

ADVERTISEMENT

ಈ ಮೂಲಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

‘ಭೂಕುಸಿತ ಸಾಧ್ಯತೆಯ ಎಚ್ಚರಿಕೆ ನೀಡಿದ್ದರೂ ಕೇರಳ ಸರ್ಕಾರ ಅದನ್ನು ಕಡೆಗಣಿಸಿತ್ತು’ ಎಂದು ಶಾ ಅವರು ಹೇಳಿದ್ದರು. ಆದರೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಶಾ ಹೇಳಿಕೆಯನ್ನು ಅಲ್ಲಗಳೆದಿದ್ದರಲ್ಲದೆ ‘ಆರೆಂಜ್‌ ಅಲರ್ಟ್‌’ ಮಾತ್ರ ಘೋಷಿಸಲಾಗಿತ್ತು ಎಂದಿದ್ದರು.

ಗುರುವಾರ ವರ್ಚುವಲ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಪಾತ್ರ ‘ಜುಲೈ 25ರಿಂದ ಆಗಸ್ಟ್ 1ರವರೆಗೆ ಪಶ್ಚಿಮ ಕರಾವಳಿ ಮತ್ತು ದೇಶದ ಮಧ್ಯ ಭಾಗಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಲಾಗಿತ್ತು. ನಾವು ಜುಲೈ 25ರಂದು ‘ಯೆಲ್ಲೊ ಅಲರ್ಟ್‌’ ನೀಡಿದ್ದು ಅದು ಜುಲೈ 29ರವರೆಗೆ ಮುಂದುವರೆಯಿತು. ಜುಲೈ 30ರ ಮುಂಜಾನೆ ‘ರೆಡ್‌ ಅಲರ್ಟ್‌’ ನೀಡಿ 20 ಸೆಂ.ಮೀ.ನಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂಬ ಎಚ್ಚರಿಕೆ ಕೊಟ್ಟಿದ್ದೆವು’ ಎಂದು ಹೇಳಿದರು.

‘ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರಬೇಕು ಎಂಬುದು ಆರೆಂಜ್‌ ಅಲರ್ಟ್‌ನ ಅರ್ಥ. ರೆಡ್‌ ಅಲರ್ಟ್‌ಗಾಗಿ ಕಾಯಬಾರದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.