ADVERTISEMENT

RG Kar: ತುರ್ತು ಸೇವೆ ಹೊರತುಪಡಿಸಿ ಇತರೆ ಸೇವೆ ಸ್ಥಗಿತಕ್ಕೆ ಎಫ್‌ಎಐಎಂಎ ಕರೆ

ಪಿಟಿಐ
Published 13 ಅಕ್ಟೋಬರ್ 2024, 15:36 IST
Last Updated 13 ಅಕ್ಟೋಬರ್ 2024, 15:36 IST
<div class="paragraphs"><p>ವೈದ್ಯರ ಮುಷ್ಕರ</p></div>

ವೈದ್ಯರ ಮುಷ್ಕರ

   

(ಪಿಟಿಐ ಚಿತ್ರ)

ಕೋಲ್ಕತ್ತ: ದೇಶದಾದ್ಯಂತ ಇರುವ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಆರ್‌ಡಿಎ)ಗಳನ್ನು ಪ್ರತಿನಿಧಿಸುವ ಫೆಡರೇಷನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್ (ಎಫ್‌ಎಐಎಂಎ), ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಕಿರಿಯ ವೈದ್ಯರ ಮುಷ್ಕರಕ್ಕೆ ಒಮ್ಮತ ಸೂಚಿಸುವ ಸಲುವಾಗಿ ಸೋಮವಾರದಿಂದ ಆಸ್ಪತ್ರೆಗಳಲ್ಲಿ ತುರ್ತು ಸೇವೆ ಹೊರತುಪಡಿಸಿ ಇತರೆ ಸೇವೆಗಳನ್ನು ಸ್ಧಳಿತಗೊಳಿಸುವುದಾಗಿ ಇಂದು (ಭಾನುವಾರ) ಕರೆ ನೀಡಿದೆ.

ADVERTISEMENT

ರಾಷ್ಟ್ರವ್ಯಾಪಿಯಾಗಿ ಸೇವೆ ಸ್ಥಗಿತಗೊಳಿಸುವುದಾಗಿ ಎಫ್‌ಎಐಎಂಎ ತಿಳಿಸಿದೆ. ಹಾಗಿದ್ದರೂ ದಿನದ 24 ತಾಸಿನಲ್ಲೂ ತುರ್ತು ಸೇವೆ ಲಭ್ಯವಿರುವುದಾಗಿ ಅದು ತಿಳಿಸಿದೆ.

ಇಲ್ಲಿನ ಆರ್.ಜಿ.ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕೆ ಆಗ್ರಹಿಸಿ ವೈದ್ಯರು ನಡೆಸುತ್ತಿರುವ ಆಮರಣಾಂತ ಉಪವಾಸಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಎಫ್‌ಎಐಎಂಎ ತಿಳಿಸಿದೆ.

ಅಕ್ಟೋಬರ್ 5ರಿಂದ ಕಿರಿಯ ವೈದ್ಯರು ಆಮರಣಾಂತ ಉಪವಾಸ ನಡೆಸುತ್ತಿದ್ದಾರೆ. ಮೂವರು ವೈದ್ಯರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.