ADVERTISEMENT

ನಮ್ಮಲ್ಲೂ ಕಾಣಲಿದೆ ಶತಮಾನದ ಗ್ರಹಣ

ಪಿಟಿಐ
Published 8 ಜುಲೈ 2018, 20:02 IST
Last Updated 8 ಜುಲೈ 2018, 20:02 IST
   

ಕೋಲ್ಕತ್ತ:ಜುಲೈ 27ರಂದು ಚಂದ್ರಗ್ರಹವು ಸಂಪೂರ್ಣವಾಗಿ ಭೂಮಿಯ ನೆರಳನ್ನು ಹಾದು ಹೋಗಲಿದೆ. ಭಾರತವೂ ಸೇರಿ ಜಗತ್ತಿನ ಹೆಚ್ಚಿನ ಭಾಗಗಳಲ್ಲಿ ಬರಿಗಣ್ಣಿನಲ್ಲಿಯೇ ಈ ಖಗೋಳ ಚಮತ್ಕಾರವನ್ನು ಕಾಣಬಹುದು. ಇದು ಈ ಶತಮಾನದ ಅತ್ಯಂತ ದೀರ್ಘಾವಧಿಯ ಚಂದ್ರಗ್ರಹಣವೂ ಹೌದು.

ದೀರ್ಘವಾಗಿರಲು ಕಾರಣ

ಚಂದ್ರ ಭೂಮಿಯನ್ನು ಸುತ್ತುವ ಕಕ್ಷೆ ಅಂಡಾಕಾರದಲ್ಲಿದೆ. ಹಾಗಾಗಿ ಒಂದು ಸಂದರ್ಭದಲ್ಲಿ ಭೂಮಿಗೆ 3,56,400 ಕಿ.ಮೀ. ಹತ್ತಿರಕ್ಕೆ ಚಂದ್ರ ಬರುತ್ತಾನೆ. ಅದೇ ರೀತಿ, ಒಂದು ಸಂದರ್ಭದಲ್ಲಿ 4,06,700 ಕಿ.ಮೀ. ದೂರದಲ್ಲಿರುತ್ತಾನೆ.

ADVERTISEMENT

ಚಂದ್ರ, ಭೂಮಿಗಿಂತ ಅತ್ಯಂತ ದೂರದಲ್ಲಿರುವಾಗ ಗ್ರಹಣ ಉಂಟಾಗುತ್ತದೆ. ಹಾಗಾಗಿ ಈ ಬಾರಿಯ ಚಂದ್ರಗ್ರಹಣ ಅತ್ಯಂತ ದೀರ್ಘ. ದೂರದಲ್ಲಿ ಇರುವುದರಿಂದ ಚಂದ್ರನ ಗಾತ್ರ ಚಿಕ್ಕದಾಗಿ ಕಾಣಿಸುತ್ತದೆ. ಹಾಗಾಗಿ ಭೂಮಿಯ ನೆರಳಿನಿಂದ ಹೊರಗೆ ಬರಲು ಹೆಚ್ಚು ಸಮಯ ಬೇಕು.

ಜುಲೈ 31ಕ್ಕೆ ಮತ್ತೊಂದು ರಸದೌತಣ

* ಸೂರ್ಯನಿಂದ ನಾಲ್ಕನೇ ಗ್ರಹ ಮಂಗಳ ಜುಲೈ 31ರಂದು ಭೂಮಿಗೆ ಅತ್ಯಂತ ಸಮೀಪಕ್ಕೆ ಬರಲಿದೆ.

* ಹಾಗಾಗಿ, ಮಂಗಳ ಗ್ರಹ ಅತ್ಯಂತ ಪ್ರಕಾಶಮಾನವಾಗಿ ಕಾಣಿಸಲಿದೆ.

* ಸೂರ್ಯಾಸ್ತದ ಬಳಿಕ ಸೂರ್ಯೋದಯದವರೆಗೆ ಆಕಾಶದಲ್ಲಿ ಮಂಗಳ ಗ್ರಹವನ್ನು ನೋಡಬಹುದು

* ಬರಿಗಣ್ಣಿಗೂ ಕಾಣಿಸುತ್ತದೆ, ಹೆಚ್ಚು ಸ್ಪಷ್ಟವಾಗಿ ನೋಡುವ ಇಚ್ಛೆ ಇರುವವರು ಟೆಲಿಸ್ಕೋಪ್‌ ಬಳಸಬಹುದು

* ಇಂತಹ ಅವಕಾಶ 15ರಿಂದ 17 ವರ್ಷಗಳ ಅವಧಿಯಲ್ಲಿ ಒಂದರಿಂದ ಎರಡು ಬಾರಿ ಮಾತ್ರ

* ಮುಂದಿನ ಅವಕಾಶ 2020ರ ಅಕ್ಟೋಬರ್‌ 6ರಂದು ದೊರೆಯಲಿದೆ. ಆದರೆ, ಅಂದು ಮಂಗಳ ಗ್ರಹ ಜುಲೈ 31ರಂದು ಇರುವುದಕ್ಕಿಂತ ಸ್ವಲ್ಪ ದೂರದಲ್ಲಿ ಇರುತ್ತದೆ. ಹಾಗಾಗಿ ಇಷ್ಟು ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣಿಸದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.