ADVERTISEMENT

ಸರ್ಕಾರವನ್ನು ಬದಲಾಯಿಸಬೇಕಾಗುತ್ತದೆ: ಜರಾಂಗೆ ಎಚ್ಚರಿಕೆ

ಮರಾಠ ಮೀಸಲಾತಿ ಹೋರಾಟ: ಜರಾಂಗೆ ಎಚ್ಚರಿಕೆ

ಪಿಟಿಐ
Published 12 ಅಕ್ಟೋಬರ್ 2024, 16:05 IST
Last Updated 12 ಅಕ್ಟೋಬರ್ 2024, 16:05 IST
.
.   

ಬೀಡ್ (ಪಿಟಿಐ): ‘ಮರಾಠ ಸಮುದಾಯದ ಬೇಡಿಕೆಗಳು ಈಡೇರದಿದ್ದರೆ ಸರ್ಕಾರವನ್ನು ಬದಲಾಯಿಸಬೇಕಾಗುತ್ತದೆ’ ಎಂದು ಹೋರಾಟಗಾರ ಮನೋಜ್‌ ಜರಾಂಗೆ  ಶನಿವಾರ ಎಚ್ಚರಿಸಿದ್ದಾರೆ.

ವಿಜಯದಶಮಿಯ ಅಂಗವಾಗಿ ನಾರಾಯಣಗಢದಲ್ಲಿ ನಡೆದ ಜಾಥಾದಲ್ಲಿ ಮಾತನಾಡಿದ ಜರಾಂಗೆ ಅವರು, ‘ಸಮುದಾಯದ ವಿರುದ್ಧ ಷಡ್ಯಂತ್ರಗಳನ್ನು ಮಾಡಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

‘ನಮ್ಮ ಮಕ್ಕಳಿಗೆ, ಸಮುದಾಯಕ್ಕೆ ಮತ್ತು ರೈತರಿಗೆ ನ್ಯಾಯ ಸಿಗದಿದ್ದರೆ ನಾವು ಬದಲಾವಣೆ ತರಬೇಕಾಗುತ್ತದೆ’ ಎಂದು ಜರಾಂಗೆ ಹೇಳಿದ್ದಾರೆ. ಆದರೆ ಅವರು ತಮ್ಮ ಮುಂದಿನ ನಡೆಯ ಬಗ್ಗೆ ತಿಳಿಸಿಲ್ಲ. ಮರಾಠ ಸಮುದಾಯಕ್ಕೆ ಒಬಿಸಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಜರಾಂಗೆ ಅವರು ಹೋರಾಟ ನಡೆಸುತ್ತಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.