ADVERTISEMENT

ಪಶ್ಚಿಮ ಬಂಗಾಳ | ಮಹಿಳೆಗೆ ನಿಂದನೆ: ಸಚಿವನ ರಾಜೀನಾಮೆಗೆ ಟಿಎಂಸಿ ಸೂಚನೆ

ಪಿಟಿಐ
Published 5 ಆಗಸ್ಟ್ 2024, 1:17 IST
Last Updated 5 ಆಗಸ್ಟ್ 2024, 1:17 IST
<div class="paragraphs"><p>ಟಿಎಂಸಿ (ಸಾಂದರ್ಭಿಕ ಚಿತ್ರ)</p></div>

ಟಿಎಂಸಿ (ಸಾಂದರ್ಭಿಕ ಚಿತ್ರ)

   

ಕೋಲ್ಕತ್ತ: ಪಶ್ಚಿಮ ಬಂಗಾಳದ ಕಾರಾಗೃಹ ಸಚಿವ ಅಖಿಲ್‌ ಗಿರಿ ಅವರು ಅರಣ್ಯ ಇಲಾ ಖೆಯ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿ, ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನಲಾದ ವಿಡಿಯೊ ಹರಿದಾಡಿದ ಬೆನ್ನಲ್ಲೇ, ಗಿರಿ ಅವರು ಕ್ಷಮೆ ಯಾಚಿಸಬೇಕು ಮತ್ತು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಟಿಎಂಸಿ ಭಾನುವಾರ ಸೂಚಿಸಿದೆ.

ಪೂರ್ವ ಮೇದಿನಿಪುರ ಜಿಲ್ಲೆಯ ಕಂಠಿಯಲ್ಲಿ ಮಾತನಾಡಿದ ಗಿರಿ ಅವರು, ‘ರಾಜೀನಾಮೆ ನೀಡುತ್ತೇನೆ. ಆದರೆ, ಕ್ಷಮೆಯಾಚಿಸುವುದಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

ಅರಣ್ಯ ಇಲಾಖೆ ಅಧಿಕಾರಿ ಮನೀಶಾ ಸಾಹು ಮತ್ತು ತಂಡವು ತಾಜ್‌ಪುರ ಸಮುದ್ರ ತೀರ ಪ್ರದೇಶದಲ್ಲಿ ಒತ್ತುವರಿಯಾಗಿದ್ದ ಅರಣ್ಯ ಇಲಾಖೆಯ ಜಾಗವನ್ನು ತೆರವುಗೊಳಿಸಿತ್ತು. ನಂತರ ಸಚಿವ ಗಿರಿ ಅವರು, ಅಧಿಕಾರಾವಧಿ ಯನ್ನು ಕಡಿತ ಮಾಡುವುದಾಗಿ ಸಾಹು ಅವರನ್ನು ಬೆದರಿಸಿದ್ದರು. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

‘ಘಟನೆ ನಂತರ ಪಕ್ಷದ ಸೂಚನೆಯಂತೆ ರಾಜ್ಯಾಧ್ಯಕ್ಷ ಸುಬ್ರತಾ ಬಕ್ಷಿ ಅವರು ಅಖಿಲ್‌ ಗಿರಿ ಅವರನ್ನು ಭಾನುವಾರ ಮಧ್ಯಾಹ್ನ ಕರೆಸಿ, ಮಹಿಳಾ ಅಧಿಕಾರಿಯ ಬಳಿ ಕ್ಷಮೆ ಕೇಳುವಂತೆ ಮತ್ತು ಕೂಡಲೇ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿದ್ದಾರೆ’ ಎಂದು ಟಿಎಂಸಿ ವಕ್ತಾರ ಶಾಂತನು ಸೇನ್‌ ತಿಳಿಸಿದರು.

ಈ ವೇಳೆ ಗಿರಿ ಅವರು, ‘ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ರಾಜೀನಾಮೆ ಯನ್ನು ಇ–ಮೇಲ್‌ ಮೂಲಕ ಕಳುಹಿಸುತ್ತೇನೆ. ಸೋಮವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೇ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾಗಿ ಶಾಂತನು ಹೇಳಿದರು. 

2022ರಲ್ಲಿಯೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತ ಗಿರಿ ಅವರ ಹೇಳಿಕೆಯು ವಿವಾದಕ್ಕೆ ಕಾರಣವಾಗಿತ್ತು. ಬಳಿಕ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕ್ಷಮೆ ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.