ADVERTISEMENT

ತನಿಖೆ ಹಂತದಲ್ಲಿರುವ ಹಗರಣಗಳ ಮಾಹಿತಿ ನೀಡಿ: ಮಮತಾ ಬ್ಯಾನರ್ಜಿಗೆ ರಾಜ್ಯಪಾಲರ ಪತ್ರ

ಪಿಟಿಐ
Published 1 ಜೂನ್ 2024, 14:19 IST
Last Updated 1 ಜೂನ್ 2024, 14:19 IST
ಸಿ.ವಿ. ಆನಂದ್‌ ಬೋಸ್‌
ಸಿ.ವಿ. ಆನಂದ್‌ ಬೋಸ್‌   

ಕೋಲ್ಕತ್ತ: ತನಿಖೆಯ ವಿವಿಧ ಹಂತದಲ್ಲಿರುವ ಎಲ್ಲಾ ಹಗರಣಗಳ ಕುರಿತು ಸಮಗ್ರ ವರದಿ ನೀಡುವಂತೆ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ್‌ ಬೋಸ್‌ ಅವರು ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ರಾಜಭವನ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದೆ.

ಸಂವಿಧಾನದ ಅಡಿ ನೀಡಲಾಗಿರುವ ಅವಕಾಶವನ್ನು ಉಲ್ಲೇಖಿಸಿ ಅವರು ಈ ಪತ್ರ ಬರೆದಿದ್ದಾರೆ. ಆಡಳಿತ ಮತ್ತು ಉದ್ದೇಶಿತ ಶಾಸನಗಳ ಕುರಿತು ಸಚಿವ ಸಂಪುಟ ತೆಗೆದುಕೊಳ್ಳುವ ನಿರ್ಧಾರಗಳನ್ನು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೂ ತಮ್ಮ ರಾಜ್ಯಪಾಲರಿಗೆ ತಿಳಿಸಬೇಕು ಎಂದು ರಾಜ್ಯಪಾಲರು ಹೇಳಿದ್ದಾರೆ

ಶಾಲಾ ಸಿಬ್ಬಂದಿ ನೇಮಕಾತಿ ಮತ್ತು ಪಡಿತರ ವಿತರಣೆ ಹಗರಣ ಹಾಗೂ ಜಾನುವಾರು ಕಳ್ಳಸಾಗಣೆ, ಕಲ್ಲಿದ್ದಲು ಕಳ್ಳತನ ಪ್ರಕರಣಗಳೂ ಸೇರಿ ರಾಜ್ಯದಲ್ಲಿ ನಡೆದಿರುವ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಕುರಿತ ಮಾಹಿತಿಯನ್ನು ಅವರು ಕೇಳಿದ್ದಾರೆ. 

ADVERTISEMENT

ರಾಜ್ಯದ ಆಡಳಿತದ ಬಹುಹಂತಗಳಲ್ಲಿ ಭ್ರಷ್ಟಾಚಾರ ಹಾಸುಹೊಕ್ಕಾಗಿರುವುದಕ್ಕೆ ಈ ಪ್ರಕರಣಗಳು ನಿದರ್ಶನಗಳಾಗಿವೆ ಎಂದು ರಾಜಭವನ ಪೋಸ್ಟ್‌ನಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.