ನವದೆಹಲಿ: ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ವರ್ಧಮಾನ್ ಅವರುಫೇಸ್‍ಬುಕ್, ಇನ್‍ಸ್ಟಾಗ್ರಾಂ ಮತ್ತು ಟ್ವಿಟರ್ ಖಾತೆ ಹೊಂದಿಲ್ಲ. ಅವರ ಹೆಸರಿನಲ್ಲಿರುವ ಫೇಕ್ ಖಾತೆಗಳನ್ನು ಫಾಲೋ ಮಾಡುವ ಮೂಲಕ ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳಬೇಡಿ ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ.
ಪಾಕ್ ವಶದಲ್ಲಿದ್ದ ಅಭಿನಂದನ್ ಅವರು ಮಾರ್ಚ್ 1ರಂದು ಭಾರತಕ್ಕೆ ವಾಪಸ್ ಆದ ಕೂಡಲೇ ಅಭಿನಂದನ್ ಹೆಸರಿನಲ್ಲಿ ಹಲವಾರು ನಕಲಿ ಖಾತೆಗಳು ಸೃಷ್ಟಿಯಾಗಿದ್ದವು. ಉತ್ತರ ಪ್ರದೇಶದಲ್ಲಿನ ಯುವಕನೊಬ್ಬ ಅಭಿನಂದನ್ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಪಾಕಿಸ್ತಾನದ ಪರ ಪೋಸ್ಟ್ ಹಾಕಿದ್ದಕ್ಕಾಗಿ ಆತನ ವಿರುದ್ಧ ಕೇಸು ದಾಖಲಾಗಿದೆ.
ಅಭಿನಂದನ್ ಹೆಸರಿನ ಫೇಕ್ ಖಾತೆಗಳ ಬಗ್ಗೆ ಭಾರತ ಸರ್ಕಾರದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ನಕಲಿ ಖಾತೆಗಳು ಇನ್ನೂ ಸಕ್ರಿಯವಾಗಿದೆ.
ಇಂಥಾ ನಕಲಿ ಖಾತೆಗಳನ್ನು ಫಾಲೋ ಮಾಡಬೇಡಿ ಎಂದ ಭಾರತೀಯ ವಾಯುಪಡೆ, ತಪ್ಪು ಮಾಹಿತಿಗಳನ್ನು ಪೋಸ್ಟ್ ಮಾಡುತ್ತಿರುವ ಖಾತೆಗಳ ಹೆಸರನ್ನು ಕೂಡಾ ಟ್ವೀಟ್ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.