ಮುಂಬೈ: ಮುಂಬೈ ಪ್ರವೇಶದ ಐದು ಟೋಲ್‌ಗಳಲ್ಲಿ ಲಘು ಮೋಟಾರು ವಾಹನಗಳಿಗೆ ಶುಲ್ಕ ವಿನಾಯಿತಿ ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಟೀಕಿಸಿರುವ ವಿರೋಧ ಪಕ್ಷ ಶಿವಸೇನಾ (ಯುಬಿಟಿ), ಇದರಿಂದ ರಾಜ್ಯದ ಬೊಕ್ಕಸಕ್ಕೆ ₹ 5,000 ಕೋಟಿಯಷ್ಟು ಹೊರೆಯಾಗಲಿದೆ ಎಂದು ದೂರಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಸರ್ಕಾರ ಈ ಕುರಿತು ಸೋಮವಾರ ತೆಗೆದುಕೊಂಡ ಸಂಪುಟ ನಿರ್ಧಾರವನ್ನು ಶಿವಸೇನಾ (ಯುಬಿಟಿ) ತನ್ನ ಮುಖವಾಣಿ ‘ಸಾಮ್ನಾ’ದಲ್ಲಿ ಟೀಕಿಸಿದೆ.
ಸಂಪುಟವು ನೀರಾವರಿ ಯೋಜನೆ, ಪ್ರಧಾನ ಮಂತ್ರಿ ಅವಾಸ್ ಯೋಜನಾ (ನಗರ)–2.0 ಹಾಗೂ ಪುಣೆ ಮೆಟ್ರೊ ಎರಡನೇ ಹಂತದ ಯೋಜನೆಗಳಿಗೂ ಅನುಮೋದನೆ ನೀಡಿದೆ. ಇವುಗಳಿಗೆಲ್ಲ ಸರ್ಕಾರದ ಬಳಿ ಹಣ ಇದೆಯೇ ಎಂದು ಪ್ರಶ್ನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.