ಮುಂಬೈ: ‘ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ (ಎನ್‌ಡಿಎ) ಶಿವಸೇನಾ ಮತ್ತು ಶಿರೋಮಣಿ ಅಕಾಲಿದಳ ಹೊರಬಂದ ಮೇಲೆ, ನಿಜವಾಗಿಯೂ ಆ ಮೈತ್ರಿಕೂಟ ಅಸ್ತಿತ್ವದಲ್ಲಿದೆಯೇ‘ ಎಂದು ಶಿವಸೇನೆ ಪ್ರಶ್ನಿಸಿದೆ.
‘ಮೊದಲು ಶಿವಸೇನಾ ಮೈತ್ರಿಕೂಟದಿಂದ ಹೊರ ಬಂದಿತ್ತು. ಮೈತ್ರಿಕೂಟದ ಕೊನೆಯ ಆಧಾರಸ್ತಂಭವಾಗಿದ್ದ ಶಿರೋಮಣಿ ಅಕಾಲಿದಳ ಎನ್‌ಡಿಎದಿಂದ ಹೊರ ನಡೆಯಿತು. ಆಗ, ಅವರನ್ನು ತಡೆಯುವುದಕ್ಕೆ ಯಾರೂ ಪ್ರಯತ್ನಿಸಲಿಲ್ಲ. ಪಂಜಾಬ್ ಮತ್ತು ಮಹಾರಾಷ್ಟ್ರ ರಾಜ್ಯಗಳ ‘ಬಲಿಷ್ಠ ಶಕ್ತಿ’ಯಾಗಿರುವ ಈ ಪಕ್ಷಗಳು ಎನ್‌ಡಿಎದಿಂದ ಹೊರಬಂದ ಮೇಲೆ, ಅಲ್ಲಿ ಇನ್ನೇನು ಉಳಿದಿದೆ‘ ಎಂದು ಶಿವಸೇನಾತನ್ನ ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಪ್ರಶ್ನಿಸಿದೆ. ‘ಈ ಮೈತ್ರಿಕೂಟ ಎರಡು ಸಿಂಹಗಳನ್ನು (ಅಕಾಲಿದಳ ಮತ್ತು ಸೇನಾ) ಕಳೆದುಕೊಂಡಿದೆ’ ಎಂದು ಉಲ್ಲೇಖಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಆಯ್ಕೆ ವೇಳೆ ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾದ ಕಾರಣ ಶಿವಸೇನಾ, ಎನ್‌ಡಿಎ ತೊರೆದಿತ್ತು. ಇತ್ತೀಚೆಗೆ ಸಂಸತ್ತಿನಲ್ಲಿ ಕೃಷಿ ಮಸೂದೆಗಳಿಗೆ ಒಪ್ಪಿಗೆ ನೀಡಿದ್ದನ್ನು ವಿರೋಧಿಸಿ ಶಿರೋಮಣಿ ಅಕಾಲಿದಳದ ಹರ್ಸಿಮ್ರತ್ ಕೌರ್ ಬಾದಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ, ಅಕಾಲಿ ದಳ ಮೈತ್ರಿಕೂಟದಿಂದ ಹೊರಗುಳಿಯುವುದಾಗಿ ಪ್ರಕಟಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.