ಸರ್ಕಾರದ ಸಲಹೆ ಮೇರೆಗೆ ದೇಶದ ಕೋಟ್ಯಂತರ ಜನರು ಉಚಿತವಾಗಿ ಜನಧನ್ ಖಾತೆಯನ್ನು ತೆರೆದಿದ್ದಾರೆ. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಸ ನಿಯಮ ಜಾರಿಗೊಳಿಸಿದೆ. ಇನ್ನು ಮುಂದೆ ಜನಧನ್ ಖಾತೆಯಿಂದ ಹಣವನ್ನು ತೆಗೆಯುವ ಸಂದರ್ಭದಲ್ಲಿ ಬ್ಯಾಂಕ್‌ಗಳು ಪ್ರತೀಬಾರಿ ₹100 ಶುಲ್ಕ ಪಡೆಯಲಿವೆ. ಹೀಗೆಂದು ಹಿಂದಿ ಪತ್ರಿಕೆಯೊಂದು ವರದಿ ಮಾಡಿದ್ದು, ಗ್ರಾಹಕರನ್ನು ಗೊಂದಲಕ್ಕೆ ಸಿಲುಕಿಸಿದೆ.
ಜನಧನ್ ಖಾತೆಯಿಂದ ಹಣ ತೆಗೆದರೆ ಶುಲ್ಕ ವಿಧಿಸಬೇಕು ಎಂಬುದಾಗಿ ಆರ್‌ಬಿಐ ಯಾವುದೇ ನಿಯಮ ರೂಪಿಸಿಲ್ಲ. ಪತ್ರಿಕಾ ವರದಿ ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಪಿಐಬಿ ಫ್ಯಾಕ್ಟ್ ಚೆಕ್ ವೇದಿಕೆ ಸ್ಪಷ್ಟಪಡಿಸಿದೆ. ಜನಧನ್ ಗ್ರಾಹಕರು ಎಂದಿನಂತೆ ಉಚಿತ ಸೇವೆ ಪಡೆಯಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.