ನವದೆಹಲಿ: ಉಗ್ರಗಾಮಿ ಸಂಘಟನೆಜೈಷ್–ಎ–ಮೊಹಮದ್‌ಪುಲ್ವಾಮಾ ದಾಳಿಯ ಹೊಣೆ ಹೊತ್ತ 12ನೇ ದಿನದಂದುಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವಶಿಬಿರಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ವೈಮಾನಿಕ ದಾಳಿಯನ್ನುನಮ್ಮ ಸರ್ಕಾರ ‘ನಾನ್–ಮಿಲಿಟರಿ ಆ್ಯಕ್ಷನ್’ (ಸೇನೆಯ ಮೇಲೆ ನಡೆಸಿದ ದಾಳಿ ಅಲ್ಲ) ಎಂದು ತಾಂತ್ರಿಕ ಪದಗಳಲ್ಲಿ ಹೇಳಿದೆ. ಅಂತರರಾಷ್ಟ್ರೀಯ ರಾಜಕಾರಣದಲ್ಲಿ ‘ನಾನ್–ಮಿಲಿಟರಿ ಆ್ಯಕ್ಷನ್’ಗೆ ತನ್ನದೇ ಆದ ಮಹತ್ವದಅರ್ಥವಿದೆ.
‘ಜೈಷ್–ಎ–ಮೊಹಮದ್ ಸಂಘಟನೆ ಭಾರತದವಿವಿಧೆಡೆ ಆತ್ಮಾಹುತಿ ದಾಳಿಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಮತ್ತು ಇದಕ್ಕಾಗಿಯೇ ಉಗ್ರಗಾಮಿಗಳಿಗೆ ಕಠಿಣ ತರಬೇತಿ ನೀಡುತ್ತಿದೆಬಗ್ಗೆ ನಮಗೆ ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಸಿಕ್ಕಿತ್ತು. ಅದನ್ನು ಆಧರಿಸಿ ಕಾರ್ಯಾಚರಣೆ ರೂಪಿಸಿದೆವು’ ಎಂದು ಭಾರತ ಸರ್ಕಾರದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಜಯ್ ಗೋಖಲೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು.
‘ನಮ್ಮ ದೇಶದ ಭದ್ರತೆ ತೀವ್ರ ಅಪಾಯದಲ್ಲಿದೆ ಎಂದು ನಮಗೆ ಮನವರಿಕೆಯಾದ ನಂತರ ಮುಂಜಾಗ್ರತಾ ಕ್ರಮವಾಗಿ ದಾಳಿ ನಡೆಸುವುದು ಅನಿವಾರ್ಯವಾಯಿತು’ ಎನ್ನುವುದು ಭಾರತ ಸರ್ಕಾರದ ಪರವಾಗಿ ಗೋಖಲೆ ನೀಡಿದ ಸಮರ್ಥನೆ.
ತಾಂತ್ರಿಕ ಪದ: ದಾಳಿ ಮಾಡಿದ ದೇಶವು‘ನಾನ್–ಮಿಲಿಟರಿ ಪ್ರಿಎಂಪ್ಟೀವ್ ಸ್ಟೈಕ್’ (ಮಿಲಿಟರಿಯೇತರ ಮುಂಜಾಗರೂಕತಾ ದಾಳಿ) ಎನ್ನುವ ಪದಗುಚ್ಛ ಬಳಸಿದಾಗ,‘ಇದು ಭಾರತೀಯ ಸೇನೆಯುಪಾಕಿಸ್ತಾನದ ಮೇಲೆ ನಡೆಸಿದ ದಾಳಿಯಲ್ಲ. ಅರ್ಥಾತ್ ಪಾಕಿಸ್ತಾನದಸೇನಾ ನೆಲೆಗಳನ್ನು ಗುರಿಯಾಗಿಸಿ ಭಾರತದಾಳಿ ನಡೆಸಿಲ್ಲ’ಎಂದು ವಿಶ್ವದ ಇತರ ಸರ್ಕಾರಗಳು ಅರ್ಥ ಮಾಡಿಕೊಳ್ಳುತ್ತವೆ ಎಂದು ವಾಯುಪಡೆಯ ಹಿರಿಯ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ‘ದಿ ಪ್ರಿಂಟ್’ ಜಾಲತಾಣ ವರದಿ ಮಾಡಿದೆ.
ದಾಳಿಗಳನ್ನು ಯೋಜಿಸುವಾಗಭಾರತ ಸರ್ಕಾರ ಈ ಎಚ್ಚರ ಇರಿಸಿಕೊಳ್ಳದಿದ್ದರೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಬೆಂಬಲಿಸುತ್ತಿರುವ ದೇಶಗಳಿಗೆ ಇರಿಸುಮುರಿಸಾಗುತ್ತಿತ್ತು. ಇದೀಗ ಭಾರತ ತನ್ನ ಕಾರ್ಯಾಚರಣೆಯನ್ನು ‘ನಾನ್ ಮಿಲಿಟರಿ’ ಎಂದು ಘೋಷಿಸಿಕೊಂಡಿರುವುದರಿಂದ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿಸುವ ಪ್ರಯತ್ನಗಳನ್ನು ಯಾವುದೇ ಅಡೆತಡೆಯಿಲ್ಲದೆ ಭಾರತ ಮುಂದುವರಿಸಬಹುದಾಗಿದೆ.
‘ಪಾಕಿಸ್ತಾನದ ಯಾವೊಬ್ಬ ಪ್ರಜೆಗೂ ತೊಂದರೆಯಾಗದಂತೆವಿಮಾನಗಳು ಬಾಂಬ್ ಹಾಕಬೇಕಾದ ಸ್ಥಳಗಳನ್ನುಎಚ್ಚರಿಕೆಯಿಂದ ಗುರುತಿಸಲಾಯಿತು. ಜೈಷ್–ಎ–ಮೊಹಮದ್ ನಡೆಸುತ್ತಿದ್ದ ಉಗ್ರರ ತರಬೇತಿ ಶಿಬಿರಗಳು ದಟ್ಟ ಕಾಡಿನ ಮಧ್ಯೆ, ಗುಡ್ಡವೊಂದರ ಮೇಲೆ ಇದ್ದವು’ ಎಂದು ಗೋಖಲೆ ಹೇಳಿದ್ದಾರೆ.
ಜೈಷ್ ಸಂಘಟನೆಯ ನಾಯಕ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಬೇಕೆಂದು ಭಾರತ ತನ್ನ ಒತ್ತಾಯವನ್ನು ತೀವ್ರಗೊಳಿಸಿದ ಬೆನ್ನಿಗೇ ಈ ದಾಳಿ ನಡೆದಿರುವುದು ಉಲ್ಲೇಖಾರ್ಹ ಸಂಗತಿ.
ಇನ್ನಷ್ಟು ಓದು
*ಪಾಕ್ ಉಗ್ರರ ನೆಲೆಗಳ ಮೇಲೆ ದಾಳಿ: ಸೀಬರ್ಡ್ ನೌಕಾನೆಲೆಯಲ್ಲಿ ಭದ್ರತೆ ಹೆಚ್ಚಳ
*ಇಂದಿನ ದಾಳಿ ನವ ಭಾರತದ ಸಂಕಲ್ಪದ ಮುನ್ನುಡಿ: ಅಮಿತ್ ಶಾ
*ಪಾಕಿಸ್ತಾನ ಇನ್ನಾದರೂ ತೆಪ್ಪಗಿರಲಿ: ಪ್ರಹ್ಲಾದ ಜೋಶಿ
*ಮೋದಿ ನುಡಿದಂತೆ ನಡೆದಿದ್ದಾರೆ; ಇದು ಪಾಕಿಸ್ತಾನಕ್ಕೆ ಎಚ್ಚರಿಕೆ ಗಂಟೆ -ಸದಾನಂದ ಗೌಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.