ಡೆಹ್ರಾಡೂನ್: ಮಹಿಳೆಯರು ಹರಿದ ಜೀನ್ಸ್ ತೊಡುವುದರ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರು ನೀಡಿದ್ದ ಹೇಳಿಕೆಗೆ ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ವಿವಿಧ ಪಕ್ಷಗಳ ಮಹಿಳೆಯರು ಮತ್ತು ನಾಯಕರು ಮುಖ್ಯಮಂತ್ರಿಯವರ ವಿರುದ್ಧ ಮುಗಿಬಿದ್ದಿದ್ದಾರೆ.
‘ಮಹಿಳೆಯರು ಹರಿದ ಜೀನ್ಸ್ ತೊಡವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ತೀರಥ್ ಸಿಂಗ್ ಅವರು, ಇಂತಹ ಮಹಿಳೆಯರು ತಮ್ಮ ಮಕ್ಕಳಿಗೆ ಯಾವ ರೀತಿಯ ಸಂಸ್ಕೃತಿ ಹೇಳಿಕೊಡುತ್ತಾರೆʼಎಂದು ಪ್ರಶ್ನಿಸಿದ್ದರು.
ರಾವತ್ ಅವರ ಈ ಹೇಳಿಕೆಗೆ ಉತ್ತರಾಖಂಡದ ಕಾಂಗ್ರೆಸ್ ಮುಖ್ಯಸ್ಥೆ ಪ್ರೀತಮ್ ಸಿಂಗ್ ‘ಇದೊಂದು ನಾಚಿಕೆಗೇಡಿನ ಹೇಳಿಕೆ. ಈ ಹೇಳಿಕೆ ನೀಡಿರುವ ರಾವತ್ ಅವರು ಕ್ಷಮೆಯಾಚಿಸಬೇಕು‘ ಎಂದು ಒತ್ತಾಯಿಸಿದ್ದಾರೆ.
ಉತ್ತರಾಖಂಡ ರಾಜ್ಯದ ಕಾಂಗ್ರೆಸ್ ವಕ್ತಾರ ಗರಿಮಾ ದಾಸೌನಿ, ‘ಯಾರೊಬ್ಬರ ಬಟ್ಟೆಗಳ ಆಯ್ಕೆ ಬಗ್ಗೆ ಮುಖ್ಯಮಂತ್ರಿಯ ವರು ಈ ರೀತಿ ಅವಹಳೇನಕಾರಿಯಾದ ಪ್ರತಿಕ್ರಿಯೆ ನೀಡುವುದು ಸರಿಯಲ್ಲ‘ ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.