ADVERTISEMENT

70 ಗಂಟೆ ಕೆಲಸ: ಇನ್ಫೊಸಿಸ್‌ ನಾರಾಯಣಮೂರ್ತಿ ಬೆಂಬಲಿಸಿದ ಕಾಂಗ್ರೆಸ್‌ನ ತಿವಾರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2023, 11:08 IST
Last Updated 10 ನವೆಂಬರ್ 2023, 11:08 IST
<div class="paragraphs"><p>ತಿವಾರಿ </p></div>

ತಿವಾರಿ

   

ಬೆಂಗಳೂರು: ಉದ್ಯಮಗಳಲ್ಲಿ ವಾರಕ್ಕೆ 70 ಗಂಟೆಯ (ಐದು ದಿನದ ದುಡಿಮೆ ದಿನಗಳಂದು) ಕೆಲಸ ಮಾಡುವುದು ಅಗತ್ಯ ಎಂಬ ವಿಷಯ ಕುರಿತಂತೆ ಇನ್ಫೊಸಿಸ್‌ ಸಂಸ್ಥಾಪಕ ಎನ್‌.ಆರ್.ನಾರಾಯಣಮೂರ್ತಿ ಅವರ ಅಭಿಪ್ರಾಯಕ್ಕೆ ಕಾಂಗ್ರೆಸ್‌ ಮುಖಂಡ ಮನೀಷ್‌ ತಿವಾರಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ನಾರಾಯಣ ಮೂರ್ತಿ ಅವರು ವಾರದಲ್ಲಿ 70 ಗಂಟೆಗಳ ಕಾಲ ಯುವಕರು ಕೆಲಸ ಮಾಡಬೇಕು ಎಂಬ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಪರ-ವಿರೋಧಗಳು ವ್ಯಕ್ತವಾಗಿತ್ತು. ಅನೇಕರು ಈ ವಿಚಾರವನ್ನು ಒಪ್ಪಿಕೊಂಡರೇ, ಇನ್ನು ಕೆಲವರು ಇದನ್ನು ವಿರೋಧಿಸಿದ್ದರು.

ADVERTISEMENT

ಮೈಕ್ರೊ ಬ್ಲಾಗಿಂಗ್ ವೇದಿಕೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಮನೀಷ್‌ ತಿವಾರಿ ಅವರು, ನಾರಾಯಣಮೂರ್ತಿ ಹೇಳಿದ್ರಲ್ಲಿ ತಪ್ಪೇನಿದೆ? ಎಂದು ಹೇಳಿದ್ದಾರೆ. 

ನಾರಾಯಣ ಮೂರ್ತಿ ಅವರಂತಹ ಹಲವಾರು ಸಾರ್ವಜನಿಕ ಪ್ರತಿನಿಧಿಗಳು ದಿನಕ್ಕೆ 12-15 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ನಾರಾಯಣ ಮೂರ್ತಿ ಅವರು 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ಯೋಚನೆ ನನಗೆ ಅರ್ಥವಾಗಿಲ್ಲ, ಆದರೆ ಅವರು ಹೇಳಿರುವುದರಲ್ಲಿ ತಪ್ಪೇನಿದೆ? ಎಂದು ಮನೀಷ್‌ ತಿವಾರಿ ಹೇಳಿದ್ದಾರೆ. 

ಒಂದು ದಿನದ ರಜೆಯೊಂದಿಗೆ 70 ಗಂಟೆಗಳ ಕೆಲಸ ಮಾಡುವುದು ರೂಢಿಯಾಗಬೇಕು. ಭಾರತ ಒಂದು ದೊಡ್ಡ ಶಕ್ತಿಯಾಗಬೇಕಾದರೆ ಒಂದು ಅಥವಾ ಎರಡು ತಲೆಮಾರುಗಳು ವಾರಕ್ಕೆ 70 ಗಂಟೆಗಳ ಕೆಲಸ ಮಾಡುವ ನೀತಿಯನ್ನು ಅನುಸರಿಸಬೇಕು. ವಾರಕ್ಕೆ 70 ಗಂಟೆಗಳ ಕೆಲಸ, ಒಂದು ದಿನ ರಜೆ ಮತ್ತು ಒಂದು ವರ್ಷದಲ್ಲಿ 15 ದಿನಗಳ ರಜೆಗಳು ರೂಢಿಯಾಗಬೇಕು ಎಂದು ಮನೀಶ್ ತಿವಾರಿ ಹೇಳಿದ್ದಾರೆ.

ನಾರಾಯಣ ಮೂರ್ತಿ ಹೇಳಿದ್ದು ಏನು?

ಜಾಗತಿಕ ಮಟ್ಟಕ್ಕೆ ಹೋಲಿಸಿದಲ್ಲಿ ಭಾರತದಲ್ಲಿ ಮಾನವ ಸಂಪನ್ಮೂಲದ ಉತ್ಪಾದನೆ ತೀರಾ ಕಡಿಮೆ. ಇಂದಿನ ಯುವ ಸಮುದಾಯವು ದುಡಿಮೆಯ ಸಂಸ್ಕೃತಿಗೆ ತಮ್ಮದೇ ಆದ ಹೆಚ್ಚಿನ ಕೊಡುಗೆ ನೀಡಿದಲ್ಲಿ, ಜಾಗತಿಕ ವೇದಿಕೆಯಲ್ಲಿ ಭಾರತ ತನ್ನ ಪಾರಮ್ಯ ಮೆರೆಯಲು ಸಾಧ್ಯ. ಆದ್ದರಿಂದ ವಾರಕ್ಕೆ 70 ಗಂಟೆಗಳ ಕೆಲಸ ಮಾಡುವುದು ರೂಢಿಯಾಗಬೇಕು ಎಂದು ನಾರಾಯಣಮೂರ್ತಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.