ಭುವನೇಶ್ವರ: ನಂದನಕಾನನ ರಾಷ್ಟ್ರೀಯ ಉದ್ಯಾನದಲ್ಲಿ 14 ವರ್ಷದ ಬಿಳಿ ಹೆಣ್ಣುಹುಲಿ ಸ್ನೇಹಾ ಮೃತಪಟ್ಟಿದೆ.
ಗುರುವಾರ ಅನಾರೋಗ್ಯಕ್ಕೆ ಈಡಾದ ಸ್ನೇಹಾಗೆ ಔಷಧಗಳನ್ನು ನೀಡಿದರೂ ಬದುಕಿ ಉಳಿಯಲಿಲ್ಲ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ವಯೋಸಹಜ ಅನಾರೋಗ್ಯದ ಜತೆಗೆ ಉಷ್ಣಹವೆಯೂ ಸ್ನೇಹಾ ಸಾವಿಗೆ ಕಾರಣವಾಗಿರಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
ಮೌಸುಮಿ (ಹೆಣ್ಣು), ಚಿನು (ಗಂಡು) ಹಾಗೂ ಅಪರೂಪದ ಗಾಢ ಬಣ್ಣದ (ರಾಯಲ್ ಬೆಂಗಾಲ್ ಪ್ರಭೇದ) ವಿಕ್ಕಿ (ಗಂಡು) ಎಂಬ ಮರಿಗಳಿಗೆ 2016ರಂದು ಸ್ನೇಹಾ ಮೊದಲ ಬಾರಿಗೆ ಗರ್ಭ ಧರಿಸಿದಾಗ ಜನ್ಮ ನೀಡಿತ್ತು. ಎರಡನೇ ಸಲ ಗರ್ಭ ಧರಿಸಿದ ಮೇಲೆ ಲವ ಮತ್ತು ಕುಶ ಎಂಬ ಹುಲಿಮರಿಗಳು ಹುಟ್ಟಿದ್ದವು. 2021ರಲ್ಲಿ ರಾಕೇಶ್, ರಾಕಿ ಹಾಗೂ ಬನ್ಶಿ ಎಂಬ ಸಾಮಾನ್ಯ ಗಂಡುಹುಲಿಮರಿಗಳಿಗೆ ಜನ್ಮ ನೀಡಿತ್ತು.
2023ರ ಜುಲೈನಲ್ಲಿ ಏಳು ಬಿಳಿಹುಲಿಗಳು ನಂದನಕಾನನ ಉದ್ಯಾನದಲ್ಲಿ ಇವೆ ಎಂದು ಅಧಿಕಾರಿಗಳು ತಿಳಿಸಿದ್ದರು. ಸ್ನೇಹಾ ಸೇರಿದಂತೆ ಕಳೆದ ನಾಲ್ಕೈದು ವರ್ಷಗಳಲ್ಲಿ ಮೂರು ಬಿಳಿಹುಲಿಗಳು ಇಲ್ಲಿ ಮೃತಪಟ್ಟಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.